ಬೆಂಗಳೂರು : 7ನೇ ಮಹಡಿಯಿಂದ ಬಿದ್ದು ಕಾರ್ಮಿಕ ಮೃತ್ಯು..!

(ನ್ಯೂಸ್ ಕಡಬ) newskadaba.com  ಬೆಂಗಳೂರು, ಡಿ. 21. ಕಟ್ಟಡದ 7 ನೇ ಮಹಡಿಯಿಂದ ಬಿದ್ದು ಕಾರ್ಮಿಕರೊಬ್ಬರು ಮೃತಪಟ್ಟಿರುವ ಘಟನೆ ಹೊಸೂರು ರಸ್ತೆಯಲ್ಲಿರುವ ಪಿಇಎಸ್ ಕಾಲೇಜು ಆವರಣದಲ್ಲಿ ಸಂಭವಿಸಿದೆ.

ಮೃತ ಕಾರ್ಮಿಕರನ್ನು ಪಶ್ಚಿಮ ಬಂಗಾಳದ ಮೂಲದ ಎಸ್.ಕೆ.ಜಿಯಾರುಲ್ (24) ಎಂದು ಗುರುತಿಸಲಾಗಿದೆ. ಮಗನ ಸಾವಿನ ಕುರಿತು ತಾಯಿ ನೀಡಿರುವ ದೂರಿನನ್ವಯ, ಕಟ್ಟಡ ನಿರ್ಮಾಣದ ಗುತ್ತಿಗೆ ಪಡೆದಿದ್ದ ಎವಿಎಸ್ ಕಂಪನಿಯ ಜವಾಹರ್, ಎಂಜಿನಿಯರ್ ನಂಬಿರಾಜನ್, ಉಸ್ತುವಾರಿ ಕುಮಾರ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Also Read  ದಕ್ಷಿಣ ಕನ್ನಡದ ಪಿಎಂ ಆವಾಸ್ ಯೋಜನೆ ಫಲಾನುಭವಿಗಳ ಮನೆಗಳಲ್ಲಿ “ಹರ್ ಘರ್ ತಿರಂಗಾ” ಸಂಸದ ಕ್ಯಾ. ಬ್ರಿಜೇಶ್ ಚೌಟರಿಂದ ಜಪ್ಪಿನಮೊಗರಿನಲ್ಲಿ ವಿಭಿನ್ನ ಪರಿಕಲ್ಪನೆಯ ಅಭಿಯಾನಕ್ಕೆ ಚಾಲನೆ

error: Content is protected !!
Scroll to Top