ತಟ್ಟೆಯಲ್ಲಿ ಅನ್ನ ಕೊಟ್ಟಾಗ ತಿನ್ನಲಿಲ್ಲ, ಕೈತುತ್ತು ಕೊಟ್ಟಾಗ ಹೊಟ್ಟೆ ತುಂಬಾ ಊಟ ಮಾಡಿದ ಕೋತಿ

(ನ್ಯೂಸ್ ಕಡಬ) newskadaba.com  ಕೊಪ್ಪಳ , ಡಿ 20 :  ಜಬ್ಬಗುಡ್ಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರೊಬ್ಬರು ಕೋತಿಗೆ ತಾಯಿಯ ರೀತಿಯಲ್ಲಿ ಊಟ ಮಾಡಿಸಿರುವ ಘಟನೆಯೊಂದು ನಡೆದಿದೆ.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳೆಲ್ಲ ಮಧ್ಯಾಹ್ನ ಬಿಸಿಯೂಟವನ್ನು ಸೇವಿಸಿತ್ತಿರುವುದನ್ನು ಕೋತಿಯೊಂದು ಕುಳಿತು ಕೊಂಡು ನೋಡುತ್ತಿತ್ತು. ಇದನ್ನು ಗಮನಿಸಿದ ಶಾಲೆಯ ಮುಖ್ಯೋಪಾಧ್ಯಾಯ ಇಬ್ರಾಹಿಂ ತಟ್ಟೆಯಲ್ಲಿ ಊಟ ವನ್ನು ಕೋತಿಯ ಬಳಿ ಇಟ್ಟರು. ಆಗ ಬರಿ ಅನ್ನವನ್ನು ನೋಡಿದ ಕೋತಿ  ಊಟವನ್ನು ಸೇವಿಸಲಿಲ್ಲ. ಮತ್ತೆ ಅನ್ನವಿದ್ದ ತಟ್ಟೆಗೆ ಸಾಂಬಾರು ಹಾಕಿ ಕೋತಿಗೆ ಕೈ ತುತ್ತು ತಿನ್ನಿಸಿದ್ದಾರೆ. ಆಗ ಕೋತಿ  ಹೊಟ್ಟೆ ತುಂಬಾ ಊಟ ಮಾಡಿದೆ ಎಂದು ತಿಳಿದು ಬಂದಿದೆ.

Also Read  ಪ್ರಥಮ ಪಿಯುಸಿ ಪೂರಕ ಪರೀಕ್ಷಾ ದಿನಾಂಕ ನಿಗದಿ ➤ ಜುಲೈ 16ರಿಂದ 27ರ. ಒಳಗೆ ಮುಗಿಸುವಂತೆ ಪಿಯು ಬೋರ್ಡ್ ಆದೇಶ

error: Content is protected !!