ಥೈಲ್ಯಾಂಡ್ : ನೌಕಾಪಡೆಯ ಹಡಗು ಮುಳುಗಡೆ ; 31 ಮಂದಿ ನಾಪತ್ತೆ

(ನ್ಯೂಸ್ ಕಡಬ) newskadaba.com  ಬ್ಯಾಂಕಾಕ್ , ಡಿ 20 :  ಥೈಲ್ಯಾಂಡ್ ಕೊಲ್ಲಿಯಲ್ಲಿ ಗಸ್ತು ತಿರುಗುತ್ತಿದ್ದ ಥೈಲ್ಯಾಂಡ್ ನೌಕಾಪಡೆಯ ಹಡಗು ಸಮುದ್ರದಲ್ಲಿ ಮುಳುಗಿದೆ.  ಹಡಗಿನಲ್ಲಿ 100ಕ್ಕೂ ಅಧಿಕ ಮಂದಿ ನಾವಿಕರಿದ್ದರು ಎಂದು ವರದಿಯಾಗಿದೆ.

3 ಹಡಗು ಹಾಗೂ 2 ಹೆಲಿಕಾಪ್ಟರ್ ಬಳಸಿ ಶೋಧ ಕಾರ್ಯಾಚರಣೆ ನಡೆಸಲಾಯಿತು. ಹಡಗಿನಲ್ಲಿದ್ದ 75 ಮಂದಿಯನ್ನು ರಕ್ಷಿಸಲಾಯಿತು. ಇನ್ನೂ 31 ಮಂದಿ ನಾಪತ್ತೆಯಾಗಿದ್ದಾರೆ ಎಂದು ನೌಕಪಡೆಯ ಅಧಿಕಾರಿ ತಿಳಿಸಿದ್ದಾರೆ. ಬಿರುಗಾಳಿಯ ಹೊಡೆತಕ್ಕೆ ಹಡಗಿನ ವಿದ್ಯುತ್ ವ್ಯವಸ್ಥೆಗೆ ಹಾನಿಯಾದ್ದರಿಂದ ಪಂಪ್ ಬಳಸಿ  ಹಡಗಿನೊಳಗಿನ ನೀರನ್ನು ಹೊರಸಾಗಿಸಲು ಸಾಧ್ಯವಾಗದೆ ಹಡಗು ಮುಳುಗಿದೆ ಎಂದು ಮಾದ್ಯಮಗಳು ವರದಿ ತಿಳಿಸಿದೆ.

Also Read  ದೇಶದೆಲ್ಲೆಡೆ ಏಕತಾ ದಿವಸ ಆಚರಣೆ- ಉಕ್ಕಿನ ಮನುಷ್ಯನಿಗೆ ಪ್ರಧಾನಿ ಮೋದಿಯಿಂದ ಗೌರವಾರ್ಪಣೆ

error: Content is protected !!
Scroll to Top