ರಾಯಚೂರು :  ದೇವಸ್ಥಾನದ ಬೀಗ ಮುರಿದು ಹುಂಡಿಯನ್ನೇ ಕದ್ದ ಖದೀಮರು…..!    

Theft, crime, Robbery


(ನ್ಯೂಸ್ ಕಡಬ) newskadaba.com ರಾಯಚೂರು, ಡಿ.20  ಶ್ರೀ ಸಿದ್ದಲಂಗೇಶ್ವರ ಸ್ವಾಮಿ ದೇವಸ್ಥಾನದ ಬೀಗ ಮುರಿದ ಖದೀಮರು ಹುಂಡಿ ಹೊತ್ತೊಯ್ದಿದ್ದಾರೆ.  ದೇವಸ್ಥಾನದ ಒಳಗಿರುವ ಹುಂಡಿಯ ಬೀಗವನ್ನು ಮುರಿದು ಹಣ ಕಳವು ಮಾಡಿರುವ ಘಟನೆ ತಾಲೂಕಿನ ಮನ್ಸಲಾಪುರದ ದೇವಸ್ಥಾನದಲ್ಲಿ ಸಂಭವಿಸಿದೆ ಎಂದು ವರದಿ ತಿಳಿಸಿದೆ.






ದೇವಸ್ಥಾನ ದಲ್ಲಿ ಇದು ದೊಡ್ಡ ಹುಂಡಿಯಾಗಿದ್ದು, ಐದಾರು ಜನ ಸೇರಿ ಕಳವು ಮಾಡಿದ್ದಾರೆ ಎಂಬ ಶಂಕೆ ಕೇಳಿಬರುತ್ತಿದೆ.  ಕೆಲ ದಿನಗಳ ಹಿಂದೆಯಷ್ಟೇ ಜಾತ್ರೆ ನಡೆದಿದ್ದು, ಹುಂಡಿಗೆ ಲಕ್ಷಾಂತರ ಹಣ ಸಂಗ್ರಹಗೊಂಡಿತ್ತು.






ಹುಂಡಿ ಹಣ ಎಣಿಕೆ ಮಾಡುವ ಬಗ್ಗೆ ಗ್ರಾಮಸ್ಥರು ಚರ್ಚಿಸಿದ್ದರು. ಅಷ್ಟರಲ್ಲೇ ಈ ದುರ್ಘಟನೆ ನಡೆದಿದೆ. ಈ ಕುರಿತು ರಾಯಚೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.

 

 

error: Content is protected !!
Scroll to Top