ಮಡಿಕೇರಿ : ತ್ಯಾಜ್ಯ ಎಲ್ಲೆಂದರಲ್ಲಿ ಎಸೆದರೆ ದಂಡ    

(ನ್ಯೂಸ್ ಕಡಬ) newskadaba.com  ಮಡಿಕೇರಿ, ಡಿ.20   ಕಟ್ಟಡ ತ್ಯಾಜ್ಯವನ್ನು ನಗರದಲ್ಲಿ ಎಲ್ಲೆಂದರಲ್ಲಿ ಸುರಿಯುವವರಿಗೆ ರೂ.1 ಸಾವಿರದವರೆಗೆ ದಂಡ ವಿಧಿಸಲು ನಗರಸಭೆ ನಿರ್ಧರಿಸಿದೆ.

ನಗರಸಭೆಯು ತಾತ್ಕಾಲಿಕವಾಗಿ ಘನತಾಜ್ಯ ನಿವೇಶನ ಘಟಕದಲ್ಲಿ ಜಾಗವನ್ನು ನಿಗದಿಪಡಿಸಿದೆ. ಇಲ್ಲಿ ನಿಗದಿತ ಶುಲ್ಕ ಪಾವತಿಸಿ ವಾಹನವನ್ನು ಅಗತ್ಯವಿದ್ದಲ್ಲಿ ಪಡೆಯಬಹುದು ಅಥವಾ ಖಾಸಗಿ ವಾಹನ ಉಪಯೋಗಿಸಿಕೊಂಡು ನಿಗದಿತ ಸ್ಥಳದಲ್ಲಿ ವಿಲೇವಾರಿ ಮಾಡಬೇಕು ಎಂದು ನಗರಸಭೆಯ ಪೌರಾಯುಕ್ತ ಡಾ. ವಿಜಯ್ ಎಚ್ಚರಿಕೆ ನೀಡಿದ್ದಾರೆ ಎಂದು ವರದಿ ತಿಳಿಸಿದೆ.

Also Read  ಕ್ಷುಲ್ಲಕ ಕಾರಣಕ್ಕಾಗಿ ಆತ್ಮಹತ್ಯೆಗೆ ಶರಣಾದ ಬಾಲಕಿ.!

 

error: Content is protected !!
Scroll to Top