ಕೋಲಾರ :  ಬಾಲ್ಯದಲ್ಲೇ  ಮಕ್ಕಳಲ್ಲಿ  ಶಿಸ್ತು, ಸಂಸ್ಕಾರ  ಬೆಳೆಸಿ –  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ದೇವರಾಜ್                                                            

(ನ್ಯೂಸ್ ಕಡಬ) newskadaba.com   ಕೋಲಾರ, ಡಿ.20   ಬಾಲ್ಯದಲ್ಲೇ  ಮಕ್ಕಳಲ್ಲಿ  ಶಿಸ್ತು, ಸಂಸ್ಕಾರ  ಬೆಳೆಸುವ  ಮೂಲಕ  ಅವರನ್ನು  ಸಮಾಜ ಹಾಗೂ ದೇಶದ ಆಸ್ತಿಯಾಗುವಂತೆ  ಮಾಡುವ  ಹೊಣೆ  ಶಿಕ್ಷಕರದ್ದಾಗಿದ್ದು, ಇದಕ್ಕೆ ಪೋಷಕರ ಸಹಕಾರವೂ ಅಗತ್ಯವಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ದೇವರಾಜ್ ಅಭಿಪ್ರಾಯಪಟ್ಟರು ಎಂದು ವರದಿ ತಿಳಿಸಿದೆ.


ನಗರ  ರಂಗಮಂದಿರದಲ್ಲಿ  ನಡೆದ  ಮಡೇರಹಳ್ಳಿಯ  ಅರ್ಕಾ ಇಂಟರ್  ನ್ಯಾಷನಲ್  ಶಾಲೆಯ  ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ‘ಬೆಳೆಯುವ ಪೈರನ್ನು ಮೊಳಕೆಯಲ್ಲೇ ಕಾಣು’  ‘ಗಿಡವಾಗಿ ಬಗ್ಗದ್ದು ಮರವಾದರೆ ಬಗ್ಗೀತೇ’ ಎಂಬ ನಮ್ಮ ಹಿರಿಯರ ಮಾತುಗಳು ಅತ್ಯಂತ ಸತ್ಯವಾಗಿವೆ ಎಂದರು.

Also Read  ಎಲೆಕ್ಟ್ರಾನಿಕ್ಸ್ ಶೋ ರೂಮ್ ನಲ್ಲಿ ಅಗ್ನಿ ಅವಘಡ


ಹೆತ್ತವರನ್ನು ಮನೆಯಿಂದ ಹೊರ ಹಾಕುವ ಮನಸ್ಥಿತಿಯತ್ತ ನಮ್ಮ ಯುವಜನತೆ ಸಾಗುತ್ತಿರುವುದು ವಿಷಾದಕರ ಎಂದ ಅವರು, ಮುಂದೆ ನಾವೂ ವೃದ್ದರಾದರೆ ಇದೇ ಗತಿ ಎಂಬ ಸತ್ಯವನ್ನೇ ಮರೆಯುತ್ತಿದ್ದೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು ಎನ್ನಲಾಗಿದೆ.

 

 

error: Content is protected !!
Scroll to Top