ಬೆಂಗಳೂರು ನಿಮಾನ ನಿಲ್ದಾಣದಲ್ಲಿ ಅವ್ಯವಸ್ಥೆ ,2 ಗಂಟೆ ಮೊದಲು ಬಂದೂರು ವಿಮಾನ ಮಿಸ್

(ನ್ಯೂಸ್ ಕಡಬ) newskadaba.com ಬೆಂಗಳೂರು  , ಡಿ 20 :  ರಜಾದಿನಗಳ  ಆರಂಭಕ್ಕೂ ಮುನ್ನ ಬೆಂಗಳೂರಿನ ಕೆಂಪೇಗೌಡ  ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ಪ್ರಮಾಣದ ಜನಸಂಖ್ಯೆಯಿಂದ ನಿಲ್ದಾಣದಲ್ಲಿ ಭಾರೀ ಅಸ್ತವ್ಯಸ್ತತೆ ಸೃಷ್ಟಿಯಾಗಿದೆ.

ಈ ಹಿಂದೆ ಇಂತಹದೇ ಪರಿಸ್ಥಿತಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಕಂಡು ಬಂದಿತ್ತು. ನಂತರ ನಿಮಾನಯಾನ ಸಚಿವ ಜ್ಯೋತಿರಾದಿತ್ಯ ಎಂ.ಸಿಂಧಿಯಾ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ, ವ್ಯವಸ್ಥೆಯ ಬಗ್ಗೆ ಮಾಹಿತಿ ಪಡೆದಿದ್ದರು ಎಂದು ತಿಳಿದು ಬಂದಿದೆ.

ಇದೀಗ ಬೆಂಗಳೂರಿನಲ್ಲೂ ಇಂತಹದೇ ಘಟನೆ ನಡೆದಿದೆ. ವಿಮಾನ ನಿಲ್ದಾಣ ಟರ್ಮಿನಲ್ ನ ಹೊರಗೆ ಚೆಕ್-ಇನ್ ಕೌಂಟರ್ ಗಳಲ್ಲಿ ಮತ್ತು ನಿರ್ಗಮನ ಪೂರ್ವ ಭದ್ರತಾ ತಪಾಸಣೆ ನಡೆಸುವ ವಿಭಾಗದಲ್ಲಿ ದೊಡ್ಡ ದಾಗಿ ಪ್ರಯಾಣಿಕರ ಸಾಲು ನಿಂತಿರುವುದು ತಿಳಿದು ಬಂದಿದ್ದು, ಇದರಿಂದ ಎರಡು ಗಂಟೆಗಿಂತ ಮುಂಚಿತವಾಗಿ ಬಂದವರಿಗೆ ನಿಮಾನ ಮಿಸ್ ಹಾಗುತ್ತಿತ್ತು. ತಪಾಸಣೆ ವಿಭಾಗದಲ್ಲಿ ಈ ರೀತಿ ಅವ್ಯವಸ್ಥೆಯಿಂದ ಜನರು ಪರಾಡುವಂತೆ ಮಾಡಿದೆ. ಈ ಬಗ್ಗೆ ಪ್ರಯಾಣಿಕರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

error: Content is protected !!
Scroll to Top