ಗುಂಡಿ ತಪ್ಪಿಸಲು ಹೋಗಿ ಬೈಕ್ ಸವಾರ ಮೃತ್ಯು       

(ನ್ಯೂಸ್ ಕಡಬ) newskadaba.com   ನೆಲಮಂಗಲ, ಡಿ.20   ರಸ್ತೆಯಲ್ಲಿ ಬಿದ್ದಿದ್ದ ಗುಂಡಿ ತಪ್ಪಿಸಲು ಹೋಗಿ ಬೈಕ್ ಸವಾರರೊಬ್ಬರು ಮೃತಪಟ್ಟ ಘಟನೆ ನೆಲಮಂಗಲ ಸಮೀಪದ ಮಾದಾ ವರದ ರಸ್ತೆಯಲ್ಲಿ ಸಂಭವಿಸಿದೆ ಎಂದು ವರದಿ ತಿಳಿಸಿದೆ.

ಮೃತಪಟ್ಟವರನ್ನು ದಾವಣಗೆರೆಯ ಹರ್ಷ ( 25 ) ಎಂದು ಗುರುತಿಸಲಾಗಿದೆ.

ಗುಂಡಿ ತಪ್ಪಿಸಲು ಹೋಗಿ ಅಯತಪ್ಪಿ ರಸ್ತೆಯ ಮಧ್ಯದಲ್ಲಿ ಬಿದ್ದಿದ್ದ ಸವಾರನ ಮೇಲೆ ಹಿಂಬದಿಯಿಂದ ಬಂದ ಲಾರಿ ಹರಿದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

Also Read  ಸಕ್ರೆಬೈಲು :ಕಾಡಾನೆ ದಾಳಿಗೆ ಆಕರ್ಷಣೀಯ ಆನೆ "ರಂಗ" ಬಲಿ

ಲಾರಿ ಚಾಲಕ ಪರಾರಿಯಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ.

 

 

error: Content is protected !!
Scroll to Top