ಕಾರವಾರ : ಕಾರಿನ ಬಾನೆಟ್ ಗೆ ನುಗ್ಗಿದ ಕಾಳಿಂಗ ಸರ್ಪ   



(ನ್ಯೂಸ್ ಕಡಬ) newskadaba.com   ಕಾರವಾರ, ಡಿ.20  ಕಾರಿನ ಬಾನಟ್ ಗೆ ಅಚಾನಕ್ ನುಗ್ಗಿದ 10 ಅಡಿ ಉದ್ದದ ಕಾಳಿಂಗ ಸರ್ಪವು ಆತಂಕ ಮೂಡಿಸಿದ ಘಟನೆ ಕಾರವಾರ ದಲ್ಲಿ ಸಂಭವಿಸಿದೆ. ಅರಣ್ಯ ಇಲಾಖೆಯ ಸಿಬ್ಬಂದಿ  ಸತತ ನಾಲ್ಕು ಗಂಟೆ ಕಾರ್ಯಾಚರಣೆ ಮಾಡಿ ಹಾವನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟರು ಎಂದು ತಿಳಿದುಬಂದಿದೆ.





ಜೈಸಿಂಗ್ ಎಂಬುವವರು ಮಧ್ಯಾಹ್ನ ತಮ್ಮ ಕಾರಿನಲ್ಲಿ ಬರುತ್ತಿದ್ದರು. ಆಗ ಕುಚೇಗಾರ್ ಹತ್ತಿರ ಕಾಳಿಂಗ ಸರ್ಪವು ಬಾನೆಟ್ ನೊಳಗೆ ನುಗ್ಗಿತ್ತು ಎನ್ನಲಾಗಿದೆ.






ಕಾರ್ಯಾಚರಣೆಯಲ್ಲಿ ಸಿಬ್ಬಂದಿ ರಜತ್ ಗೋವೇಕರ್, ಪರಶುರಾಮ್, ಮಧುಕುಮಾರ್, ನಾಗರಾಜ್,ರಾಜೇಶ್, ರಾಘವೇಂದ್ರ, ಸಂದೀಪ್ ಇದ್ದರು ಎಂದು ತಿಳಿದುಬಂದಿದೆ.

 

error: Content is protected !!
Scroll to Top