ಒಂದೇ ಕುಟುಂಬದ ಮೂವರು ಆತ್ಮಹತ್ಯೆ…..!



(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 20. ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ಸಂಭವಿಸಿದೆ.





ಮೃತಪಟ್ಟವರನ್ನು ಯಶೋಧಾ (70), ಸುಮನ್ (41) ಹಾಗೂ ನರೇಶ್ ಗುಪ್ತಾ(36) ಎಂದು ಗುರುತಿಸಲಾಗಿದ್ದು, ಮೇಲ್ನೋಟಕ್ಕೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ  ಶಂಕೆ ವ್ಯಕ್ತವಾಗಿದೆ. ಇವರು ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ನ ಮನೆಯೊಂದರಲ್ಲಿ ವಾಸವಾಗಿದ್ದು, ಮೃತ ಯಶೋದಾರಿಗೆ ಮೂವರು ಮಕ್ಕಳಿದ್ದರು. ಈ ಪೈಕಿ ಒಬ್ಬ ಮಗಳಿಗೆ ಮದುವೆ ಆಗಿ ರಾಜಾಜಿನಗರದಲ್ಲಿ ನೆಲೆಸಿದ್ದರೆ, ಮಗ ನರೇಶ್, ಮತ್ತೋರ್ವ ಪುತ್ರಿ ಸುಮನ್ ತಾಯಿ ಜತೆ ನೆಲೆಸಿದ್ದರು ಎನ್ನಲಾಗಿದೆ.






error: Content is protected !!
Scroll to Top