ವಿದ್ಯಾರ್ಥಿಗೆ ಶಿಕ್ಷಕನಿಂದ ಹಲ್ಲೆ ..!!!!         

(ನ್ಯೂಸ್ ಕಡಬ) newskadaba.com  ಗದಗ, ಡಿ.19  ಮುತ್ತಪ್ಪ ಹಡಗಲಿ ಎಂಬ ಅತಿಥಿ ಶಿಕ್ಷಕನ ಹುಚ್ಚಾಟಕ್ಕೆ 4ನೇ ತರಗತಿಯಲ್ಲಿದ್ದ ಭರತ್ (10) ಎಂಬ ವಿದ್ಯಾರ್ಥಿ ಮೃತ ಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಗಂಭೀರ ಗಾಯಗೊಂಡಿದ್ದ ಸಹಶಿಕ್ಷಕಿ ಗೀತಾ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ.

ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸಹಶಿಕ್ಷಕಿ ಗೀತಾ ಹಾಗೂ ವಿದ್ಯಾರ್ಥಿ ಭರತ್ ಎಂಬಾತನ ಮೇಲೆ  ಮಾರಣಾಂತಿಕ ಹಲ್ಲೆ ಮಾಡಿದ್ದ, ಇದರಿಂದ ಇಬ್ಬರೂ ಗಂಭೀರವಾಗಿ ಗಾಯಗೊಂಡ ಆಸ್ಪತ್ರೆ ಸೇರಿದ್ದರು.

ಮೃತ ವಿದ್ಯಾರ್ಥಿ ಭರತ್ ಹಲ್ಲೆಗೊಳಗಾದ ಶಿಕ್ಷಕಿ ಗೀತಾ ಪುತ್ರ. ಕಿರಾತಕ ಶಿಕ್ಷಕ ಭರತ್ ಗೆ ಸಲಿಕೆಯಿಂದ ಹೊಡೆದು, ಶಾಲೆಯ ಒಂದನೇ ಮಹಡಿಯಿಂದ ಕೆಳಗೆ ಎಸೆದಿದ್ದಾನೆ. ಈ ವೇಳೆ ತಡೆಯಲು ಹೋದ ಇನ್ನೊಬ್ಬ ಶಿಕ್ಷಕ ಎಸ್.ಸಿ.ಪಾಟೀಲ್ ಮೇಲೆಯೂ ಹಲ್ಲೆ ಮಾಡಿದ್ದಾನೆ.

Also Read  ಭೀಕರ ಅಪಘಾತ! ➤ಓರ್ವ ಮೃತ್ಯು, ಮೂವರು ಗಂಭೀರ

 

 

error: Content is protected !!
Scroll to Top