ಪುತ್ತೂರು : ಅಕ್ರಮ ಗೋ ಸಾಗಾಟ      ➤ ಇಬ್ಬರು ಆರೋಪಿಗಳ ಬಂಧನ…!!!  

(ನ್ಯೂಸ್ ಕಡಬ) newskadaba.com  ಪುತ್ತೂರು, ಡಿ.19  ಹಸು ಮತ್ತು ಕರುವನ್ನು ಪಿಕಪ್ ವೊಂದರಲ್ಲಿ  ಪೆರ್ಲಕ್ಕೆ ಅಕ್ರಮವಾಗಿ ಸಾಗಾಟ ಮಾಡಿದ ಘಟನೆ ಆರ್ಲಪದವು ಎಂಬಲ್ಲಿ ಸಂಭವಿಸಿದೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಪಿಕಪ್ ವಾಹನ ಮತ್ತು ಅದರಲ್ಲಿದ್ದ ಹಸು, ಕರು ಸಮೇತ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ವರದಿ ತಿಳಿಸಿದೆ.

ಆರೋಪಿಗಳನ್ನು ಜಗನ್ನಾಥ (62) ಮತ್ತು ಪಿಕಪ್ ಚಾಲಕ ಗೌರಿಶಂಕರ್ (51) ಎಂದು ಗುರುತಿಸಲಾಗಿದೆ. ಇವರು ಪೆರ್ಲ ಕಡೆ ಪಿಕಪ್ ವಾಹನದಲ್ಲಿ ಹಸು ಮತ್ತು ಕರುವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಕುರಿತು ಮಾಹಿತಿ ಅರಿತ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು ಎನ್ನಲಾಗಿದೆ.

Also Read  ರಫೆಲ್ ಯುದ್ಧ ವಿಮಾನ ವಿಂಗ್‌ ಕಮಾಂಡರ್‌ ಅರುಣ್‌ ಕುಮಾರ್‌ ನನ್ನಹೆಮ್ಮೆಯ ಶಿಷ್ಯ ➤ ಸುಳ್ಯ ಶಿಕ್ಷಕ ದಾಮೋದರ್

 

error: Content is protected !!
Scroll to Top