(ನ್ಯೂಸ್ ಕಡಬ) newskadaba.com ಕಳಸ , ಡಿ 19 : ಪಟ್ಟಣದ ಹೊರವಲಯದ ಗಣಪತಿಕಟ್ಟೆ , ಸುಳುಗೋಡು , ಗೊಡ್ಲುಮನೆ ಪ್ರದೇಶದಲ್ಲಿ ವಾರಗಳಿಂದ 2 ಕಾಡಾನೆಗಳು ಉಪಟಳ ನೀಡುತ್ತಿದ್ದು, ಹಗಲಿನಲ್ಲಿ ಕಾಡಿಗೆ ಹೋಗಿ ನಂತರ ರಾತ್ರಿ ಹೊತ್ತಿನಲ್ಲಿ ತೋಟಕ್ಕೆ ನುಗ್ಗಿ ಬಾಳೆಗಿಡಗಳನ್ನು ಧ್ವಂಸ ಮಾಡುತ್ತಿವೆ ಎನ್ನಲಾಗಿದೆ.
ಸೆಪ್ಟೆಂಬರ್ ಮೊದಲ ವಾರ ಹಳುವಳ್ಳಿ ಮೂಲಕ ಕಳಸ ಪ್ರವೇಶ ಮಾಡಿದ ಆನೆಗಳು ಕುದುದೆಮುಖದವರೆಗೂ ತೆರಳಿ ನಂತರ ವಾಪಸ್ ಕಳಸಕ್ಕೆ ಬಂದಿವೆ. ಈಗ ಸುಳುಗೋಡು , ಗೊಡ್ಲುಮನೆಯ ಪ್ರದೇಶದಲ್ಲಿ ನಲೆಸಿವೆ. ಭತ್ತದ ಗದ್ದೆಗಳ ಮೂಲಕ ಸಾಗಿ ಬಹಳಷ್ಟು ಹಾನಿ ಮಾಡುವ ಆನೆಗಳು ಈಗ ಕಾಫಿ ತೋಟಗಳಿಗೂ ನಷ್ಟ ತಂದಿವೆ ಎನ್ನಲಾಗಿದೆ. ಅರಣ್ಯಧಿಕಾರಿಗಳ ಬಳಿ ಆನೆಗಳನ್ನು ಶೀಘ್ರವಾಗಿ ಸೆರೆ ಹಿಡಿಯಬೇಕು ಎಂದು ರೈತರು ತಿಳಿಸಿದ್ದಾರೆ.