ಮಂಗಳೂರು : ಬಾಂಬ್ ಸ್ಪೋಟ – ಸಂತ್ರಸ್ತ ಚಾಲಕನ ಮನೆ ದುರಸ್ತಿಗೆ ನೆರವು

(ನ್ಯೂಸ್ ಕಡಬ) newskadaba.com   ಮಂಗಳೂರು, ಡಿ.19  ನಗರದ ಗರೋಡಿಯಲ್ಲಿ ಇತ್ತೀಚೆಗೆ ನಡೆದ ಕುಕ್ಕರ್ ಬಾಂಬ್ ಸ್ಫೋಟದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆಟೋರಿಕ್ಷಾ ಚಾಲಕ ಉಜ್ಜೋಡಿಯ ಪುರುಷೋತ್ತಮ ಪೂಜಾರಿ ಅವರ ಮನೆಯನ್ನು ದುರಸ್ತಿಗೊಳಿಸಲು ‘ ಗುರು ಬೆಳದಿಂಗಳು ಫೌಂಡೇಷನ್ ‘ ಮುಂದಾಗಿದೆ ಎನ್ನಲಾಗಿದೆ.

ಗುರುಬೆಳದಿಂಗಳು ಫೌಂಡೇಷನ್ ಅಧ್ಯಕ್ಷ ಹಾಗೂ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಖಜಾಂಜಿ ಪದ್ಮರಾಜ್ ಆರ್.ಅವರು, ಘಟನೆ ಮರುದಿನ ಆಸ್ಪತ್ರೆಗೆ ಭೇಟಿ ನೀಡಿ , ಪುರುಷೋತ್ತಮ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದಾರೆಂದು ವರದಿ ತಿಳಿಸಿದೆ.

ಎಂಜಿನಿಯರ್ ದೀವರಾಜ್ ಜೊತೆ ಪುರುಷೋತ್ತಮ ಪೂಜಾರಿ ಅವರ ಮನೆಗೆ ಪದ್ಮರಾಜ್ ನೀಡಿ, ಅವರ ಕುಟುಂಬ ಸದಸ್ಯರ ಜೊತೆ ಮನೆ ನವೀಕರಣದ ಕುರಿತು ಚರ್ಚಿಸಿದರು ಎಂದು ತಿಳಿದುಬಂದಿದೆ.

Also Read  ಕೊಕ್ಕಡ : ಗಂಡು ಕಾಡಾನೆ ಪ್ರತ್ಯಕ್ಷ                        

 

error: Content is protected !!
Scroll to Top