ವಿಗ್ರಹ ಮಾರಾಟಕ್ಕೆ ಯತ್ನಿಸಿದವರ ಬಂಧನ    ➤ ಐವರು ಆರೋಪಿಗಳು ಸೆರೆ .!!!                                                           

(ನ್ಯೂಸ್ ಕಡಬ) newskadaba.com    ಬೆಂಗಳೂರು, ಡಿ.19     200 ವರ್ಷಗಳ ಹಳೆಯ ಬುದ್ಧ ವಿಗ್ರಹ ಮಾರಾಟಕ್ಕೆ ಯತ್ನಿಸುತ್ತಿದ್ದ ಐವರು ಆರೋಪಿಗಳನ್ನು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ.

ತೆಲಂಗಾಣದ ಪಂಚಮರ್ತಿ ರಘು ರಾಮ ಚೌಧರಿ ಅಲಿಯಾಸ್ ಪಿ.ರಘು, ಉದಯ್ ಕುಮಾರ್, ಫ್ರೆಡ್ಡಿ ಡಿಸೋಜ್, ಶರಣ್ ನಾಯರ್ ಹಾಗೂ ಎಂ.ಕೆ.ಪ್ರಸನ್ನ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.

ಇವರೆಲ್ಲರನ್ನೂ ರಿಯಲ್ ಎಸ್ಟೇಟ್ ಮಧ್ಯರ್ತಿಗಳು ಎನ್ನಲಾಗಿದೆ. ಅಕ್ರಮ ಹಣ ಸಂಪಾದನೆಗೆ ವಿಗ್ರಹ ಮಾರಾಟಕ್ಕೆ ಯೋಚಿಸಿದರು ಎಂದು ತಿಳಿದುಬಂದಿದೆ. ವಿದೇಶಕ್ಕೆ ವಿಗ್ರಹ ಕಳುಹಿಸುವುದು ಆರೋಪಿಗಳ ಉದ್ದೇಶವಾಗಿತ್ತು ಎನ್ನಲಾಗಿದೆ. ಪ್ರಮುಖ ಆರೋಪಿ ಶ್ರೀಕಾಂತ್ ಬಂಧನಕ್ಕೆ ಶೋಧ ನಡೆಯುತ್ತಿದೆ ಎಂದು ತಿಳಿದುಬಂದಿದೆ.

Also Read  ರೈತರಿಗೆ ಮತ್ತೊಂದು ಗುಡ್ ನ್ಯೂಸ್ ➤ ಜ. 31 ರಂದು 'ರೈತಶಕ್ತಿ' ಯೋಜನೆಗೆ ಸಿಎಂ ಚಾಲನೆ                             

 

error: Content is protected !!
Scroll to Top