(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ.18 ಬೆಂಗಳೂರಿನ ಜೆ.ಪಿ. ನಗರದ 8ನೇ ಹಂತದ ಮನೆಯಲ್ಲಿ ಕೋಳಿಗಳು ಕೂಗುತ್ತಿದ್ದು, ಅದರಿಂದ ನಿದ್ದೆ ಮಾಡಲಾಗುತ್ತಿಲ್ಲ ಎಂದು ಸಾಮಾಜಿಕ ಜಾಲತಾಣದ ಮೂಲಕ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ ಎಂದು ತಿಳಿದುಬಂದಿದೆ.
ಪ್ರತಿನಿತ್ಯ ಹಗಲು- ರಾತ್ರಿಯೆನ್ನದೇ ಕೋಳಿಗಳು ಕೂಗುತ್ತಿದ್ದು, ಸುತ್ತಲಿನ ನಿವಾಸಿಗಳಿಗೆ ನಿದ್ದೆ ಇಲ್ಲದಂತಾಗಿದೆ. ಕೂಡಲೇ ಕೋಳಿ ಸಾಕಣೆ ಮಾಡುತ್ತಿರುವವರ ಮೇಲೆ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಜಾಲತಾಣ ಟ್ವಿಟರ್ ಮೂಲಕ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ.
ಪೊಲೀಸ್ ಠಾಣೆಗೆ ಯಾವ್ಯಾವ ರೀತಿಯ ದೂರುಗಳು ಬರುತ್ತವೆ ಗೊತ್ತೇ ಆಗುವುದಿಲ್ಲ. ಕೆಲವು ದೂರುಗಳನ್ನು ಕೇಳಿದ ಪೊಲೀಸರಿ ಆಶ್ವರ್ಯಕ್ಕೆ ಒಳಗಾಗಿದ್ದೂ ಇದೆ ಎನ್ನಲಾಗಿದೆ.
ಈ ಪೊಲೀಸ್ ಪ್ರಕರಣ ದಾಖಲಿಸಿರುವುದನ್ನು ನೋಡಿದರೆ ಎಂಥವರಿಗೂ ನಗು ಬಾರದೇ ಇರದು. ಕೆಲವರು ಆಶ್ಚರ್ಯವನ್ನೂ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.