ನೆಲ್ಯಾಡಿ :  ಅನುಮತಿ ಇಲ್ಲದೆ ಮಾಹಿತಿ ಸಂಗ್ರಹ ➤ ಮೂವರು ಪೊಲೀಸರ ಬಲೆಗೆ..!!!                              

(ನ್ಯೂಸ್ ಕಡಬ) newskadaba.com  ನೆಲ್ಯಾಡಿ, ಡಿ.18   ಅನುಮತಿಯಿಲ್ಲದೆ ಮತದಾರರ ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮೂವರನ್ನು ಸಾರ್ವಜನಿಕರು ಪೊಲೀಸರಿಗೊಪ್ಪಿಸಿರುವ ಘಟನೆ ನೆಲ್ಯಾಡಿ ಸಮೀಪದ ಹೊಸಮಜಲು ಎಂಬಲ್ಲಿ ಸಂಭವಿಸಿದೆ.

ಹೊಸಮಜಲು ಸಮೀಪದ ಹೋಟೆಲ್ ವೊಂದಕ್ಕೆ ಬಂದಿದ್ದ ಕನ್ನಡ ಹಾಗೂ ತಮಿಳು ಮಿಶ್ರಿತ ಭಾಷೆ ಮಾತನಾಡುತ್ತಿದ್ದ ವ್ಯಕ್ತಿಯೋರ್ವರು ಚಹಾ ಅಂಗಡಿಯಲ್ಲಿದ್ದ ಹೊಸಮಜಲು ಸರಕಾರಿ ಹಿ.ಪ್ರಾ.ಶಾಲೆಯ ಎಸ್ ಡಿ ಎಂ ಸಿ ಮಾಜಿ ಅಧ್ಯಕ್ಷ ಕೆ.ಇ.ಅಬೂಬಕ್ಕರ್ ರವರಲ್ಲಿ ಇಂದಿರಾಗಾಂಧಿ, ಸೋನಿಯಾಗಾಂಧಿ, ಅಟಲ್ ಬಿಹಾರಿ ವಾಜಪೇಯಿ ಸೇರಿದಂತೆ ಹಿರಿಯ ರಾಜಕೀಯ ನಾಯಕರ ಬಗ್ಗೆ ಪ್ರಶ್ನೆ ಕೇಳಿದ್ದರು ಎನ್ನಲಾಗಿದೆ.

Also Read  ಕಲ್ಲುಗುಡ್ಡೆ: ನೇರ್ಲ ಶಾಲೆಯಲ್ಲಿ ಚಪ್ಪಲಿ ವಿತರಣೆ

ಆ ಬಳಿಕ ನಿಮ್ಮ ಮನೆಯಲ್ಲಿ ಎಷ್ಟು ಜನ ಮತದಾರರಿದ್ದಾರೆ. ಮನೆಯಲ್ಲಿ ಎಷ್ಟು ಜನ ಸದಸ್ಯರಿದ್ದಾರೆ. ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್ ಬಗ್ಗೆಯೂ ಪ್ರಶ್ನಿಸಿದ್ದಾನೆ ಎಂದು ತಿಳಿದುಬಂದಿದೆ. ಇವೆಲ್ಲ ಮಾಹಿತಿ ನಿಮಗೆ ಯಾಕೆ ? ಎಂದು ಪ್ರಶ್ನಿಸಿದಾಗ  ಮನೆಗಳಿಗೆ ತೆರಳಿ ಸರ್ವೆ ಮಾಡುತ್ತಿದ್ದೇವೆ ಎಂದಿದ್ದಾರೆ.  ಈ ವೇಳೆ ಸ್ಥಳದಲ್ಲಿ ಹಲವು ಮಂದಿ ಗ್ರಾಮಸ್ಥರು ಜಮಾಯಿಸಿದ್ದರು ಎನ್ನಲಾಗಿದೆ.

 

 

 

error: Content is protected !!
Scroll to Top