ಕಡಬ :  ಮನೆಯಿಂದ 2 ಲಕ್ಷ ರೂ. ನಗದು ಕಳವು !!!!  

Crime

(ನ್ಯೂಸ್ ಕಡಬ) newskadaba.com  ರಾಮಕುಂಜ, ಡಿ.18   ಕಡಬ ತಾಲೂಕಿನ ಕೊಯಿಲ ಗ್ರಾಮದ ಮನೆಯೊಂದರಲ್ಲಿ 2 ಲಕ್ಷ ರೂ.ನಗದು ಕಳವುಗೊಂಡಿರುವ ಘಟನೆ ನಡೆದಿದ್ದು, ಈ ಕುರಿತು ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.

ಕೊಯಿಲ ಗ್ರಾಮದ ಗಂಡಿಬಾಗಿಲು ನಿವಾಸಿ ಮಹಮ್ಮದ್ ರಫೀಕ್ ಎಂಬವರ ಪುತ್ರ ಮಹಮ್ಮದ್ ರಾಹೀಲ್ ರವರು ದೂರು ದಾಖಲಿಸಿದ್ದಾರೆ ಎನ್ನಲಾಗಿದ್ದು, ಇಂಟೀರಿಯರ್ ಡಿಸೈನ್ ಹಾಗೂ ಅಂಗಡಿ ವ್ಯಾಪಾರ ಮಾಡಿ ದುಡಿದ ರೂ.2 ಲಕ್ಷವನ್ನು ಅವರು ಮಲಗುವ ಕೋಣೆಯ ಕಪಾಟಿನಲ್ಲಿ ಇಟ್ಟಿದ್ದು, ಕೋಣೆಯ ಬಾಗಿಲಿನ ಕೀ ತಾಯಿಯ ಬಳಿ ಇರುತ್ತದೆ.

ಪುತ್ತೂರು ಧನ್ವಂತರಿ ಆಸ್ಪತ್ರೆಗೆ ಹೋಗಿದ್ದು ಅಲ್ಲಿ ತಂಗಿಯನ್ನು ದಾಖಲಿಸಿದ್ದು, ತಾಯಿಯು ತಂಗಿಯ ಆರೈಕೆಯಲ್ಲಿ ಆಸ್ಪತ್ರೆಯಲ್ಲಿರುತ್ತಾರೆ. ರೂಮಿನ ಕಪಾಟಿನಲ್ಲಿಟ್ಟಿದ್ದ ಹಣದಲ್ಲಿ 5 ಸಾವಿರ ತೆಗೆದುಕೊಂಡಿದ್ದು ಉಳಿದ ಹಣ ರೂಮಿನಲ್ಲಿಯೇ ಇದೆ ಎಂದು ತಿಳಿಸಿದ್ದು, ಆಸ್ಪತ್ರೆಯಲ್ಲಿ ತಾಯಿ ಕೊಟ್ಟ ಒಡವೆಗಳನ್ನು ತನ್ನ ರೂಮಿನಲ್ಲಿ ಇರಿಸಿ ಬಳಿಕ ಮಲಗಿರುತ್ತೇನೆ. ಬೆಳಗ್ಗೆ 5.30 ಗಂಟೆಗೆ ಎದ್ದು ನೋಡಿದಾಗ ಮನೆಯ ಬಾಗಿಲು ತೆರೆದಿರುತ್ತದೆ, ಅಲ್ಲದೆ ರೂಮಿನ ಕಪಾಟಿನಲ್ಲಿಟ್ಟಿದ್ದ 2 ಲಕ್ಷ ಹಣವನ್ನು ಯಾರೋ ಕಳ್ಳರು ಕಳವು ಮಾಡಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ. ಈ ಕುರಿತು ಕಡಬ ಪೊಲೀಸ್ ಠಾಣೆಯಲ್ಲಿ  454.457.380 ಐಪಿಸಿಯಂತೆ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.

Also Read  ಕೇಂದ್ರದಿಂದ ದ.ಕ ಜಿಲ್ಲೆಗೆ 'ಪಿಎಂ ಜನ್ ಮನ್' ಯೋಜನೆಯಡಿ ಬುಡಕಟ್ಟು ಸಮುದಾಯ ಅಭ್ಯುದಯಕ್ಕೆ 10.32 ಕೋಟಿ ರೂ. ಬಿಡುಗಡೆ ಸಂಸದ ಕ್ಯಾ. ಚೌಟ

 

 

 

error: Content is protected !!
Scroll to Top