ಹೃದಯಾಘಾತದಿಂದ 4ನೇ ತರಗತಿ ವಿದ್ಯಾರ್ಥಿ ಮೃತ್ಯು…!

(ನ್ಯೂಸ್ ಕಡಬ) newskadaba.com  ಭೋಪಾಲ್ , ಡಿ 18 : ಇತ್ತೀಚೆಗೆ ಯುವ ಪೀಳಿಗೆಯವರೇ ಹೆಚ್ಚಿನ ಸಂಖ್ಯೆಯಲ್ಲಿ ಹೃದಯಾಘಾತಕ್ಕೀಡಾಗಿ ಮೃತಪಡುತ್ತಿದ್ದಾರೆ. ಆದರೆ ಇಲ್ಲೊಬ್ಬ ಹುಡುಗ ಯೌವ್ವನಕ್ಕೆ ಕಾಲಿಡುವ ಮೊದಲೇ ಹೃದಯಾಘಾತಕ್ಕೀಡಾಗಿ ಮೃತಪಟ್ಟಿದ್ದಾನೆ.

ಮೃತಬಾಲಕನನ್ನು ಮನಿಶ್ ಜತವ್ (12) ಎಂದು ಗುರುತಿಸಲಾಗಿದೆ. ಈತ ನಾಲ್ಕನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಅತಿ ಕಿರಿಯ ವಯಸ್ಸಲ್ಲಿ ಹೃದಯಾಘಾತಕ್ಕೆ ಬಲಿಯಾದ ಮಧ್ಯಪ್ರದೇಶದ ಮೊದಲ ಪ್ರಕರಣ ಇದಾಗಿದೆ. ಈ ಬಾಲಕ ಶಾಲೆಯನ್ನು ಮುಗಿಸಿ  ಶಾಲಾ ಬಸ್ ನಲ್ಲಿ ಬರುವಾಗ  ಬಸ್ ನಲ್ಲೇ ಕುಸಿದು ಬಿದ್ದನು .  ತಕ್ಷಣವೇ ಬಸ್ ಡ್ರೈವರ್ ಬಾಲಕನನ್ನು ಸಮೀಪದ ಆಸ್ಪತ್ರೆ ದಾಖಲಿಸಿದ್ದಾರೆ.  ಆದರೆ ಆಸ್ಪತ್ರೆಗೆ ಬರುವಷ್ಟರಲ್ಲಿ ಬಾಲಕ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

Also Read  ಡ್ರಗ್ಸ್ ಜಾಗೃತಿ ಮೂಡಿಸುವಲ್ಲಿ ಬರಹದಿಂದ ಗಮನಸೆಳೆಯುತ್ತಿದೆ ಮಂಗಳೂರು ಸಿಟಿ ಬಸ್

error: Content is protected !!
Scroll to Top