ಗುಂಡ್ಲುಪೇಟೆ : ಜಿಂಕೆ ಮಾಂಸ ಸಹಿತ ಓರ್ವ ಆರೋಪಿಯ ಬಂಧನ     ➤ ಇನ್ನಿಬ್ಬರು ಆರೋಪಿಗಳು ನಾಪತ್ತೆ..!!!   

(ನ್ಯೂಸ್ ಕಡಬ) newskadaba.com  ಗುಂಡ್ಲುಪೇಟೆ, ಡಿ.18  ವನ್ಯಪ್ರಾಣಿಗಳನ್ನು ಬೇಟೆಯಾಡುತ್ತಿದ್ದ ಬೇಟೆಗಾರನನ್ನು ಬಂಧಿಸಿರುವ ಅರಣ್ಯಾಧಿಕಾರಿಗಳು ಆತ ತನ್ನ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಜಿಂಕೆ ಮಾಂಸ, ಪ್ರಾಣಿಗಳ ಉಗುರು ಬಂದೂಕು, ಸಿಡಿಮದ್ದು, ಗಾಂಜಾ ಮೊದಲಾದವುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ಪ್ರಕರಣದಲ್ಲಿ ಇನ್ನಿಬ್ಬರು ಭಾಗಿಯಾಗಿರುವುದು ಬೆಳಕಿಗೆ ಬಂದಿದ್ದು ಅವರ ಪತ್ತೆಗೆ ಬಲೆ ಬೀಸಲಾಗಿದೆ.

ಆರೋಪಿಯನ್ನು ಗುಂಡ್ಲುಪೇಟೆ ನಿವಾಸಿ ಶಿವನಾಗಶೆಟ್ಟಿ (34) ಎಂದು ಗುರುತಿಸಲಾಗಿದೆ.

ಈತನೊಂದಿಗಿದ್ದ ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆಂದು ತಿಳಿದುಬಂದಿದೆ.

ಮನೆಯನ್ನು ತಪಾಸಣೆ ಮಾಡಿದ ವೇಳೆ ಅಂದಾಜು 15 ಕೆ.ಜಿ ಯಷ್ಟು ಜಿಂಕೆಯ ಮಾಂಸ ಹಾಗೂ ಬೇಟೆಗಾಗಿ ಬಳಸಿದ ನಾಟಿ ಬಂದೂಕು ಪತ್ತೆಯಾಗಿದೆ ಎನ್ನಲಾಗಿದೆ.

Also Read  ವಿದ್ಯಾರ್ಥಿನಿಗೆ ಕಿರುಕುಳ: ಆರೋಪಿ ಬಂಧನ

 

 

 

 

error: Content is protected !!