ಅನ್ನ ಹಾಕಿದ ಕಂಪನಿಗೆ ಕನ್ನ ಹಾಕಿದ ಭೂಪ…!

(ನ್ಯೂಸ್ ಕಡಬ) newskadaba.com  ಬೆಂಗಳೂರು , ಡಿ 18 :  ಕೆಲಸ ಮಾಡುತ್ತಿದ್ದ ಕಂಪನಿಯಲ್ಲೇ ಒಳ್ಳೆಯವನಂತೆ ನಟಿಸಿ ಕೊನೆಗೆ ಕಳ್ಳತನ ಮಾಡಿದ ನೌಕರ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ವಿನಯ್ ಎಂದು ಗುರುತಿಸಲಾಗಿದೆ. ಈತ  ಓಗೋ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ.  ಬೈಕ್ ಜಿಪಿಎಸ್ ಸಿಸ್ಟಂ ಸೇರಿ  ಕಂಪನಿ ವ್ಯವಸ್ಥೆ  ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡಿದ್ದ  ಈತ 8 ತಿಂಗಳ ಹಿಂದೆ ಕೆಲಸ ಬಿಟ್ಟು ಮನೆಯಲ್ಲಿಯೇ ಇದ್ದ. ಇದೇ ವೇಳೆ ಐಷಾರಾಮಿ ಜೀವನಕ್ಕಾಗಿ ತನಗೆ ಅನ್ನ ಕೊಟ್ಟ ಕಂಪನಿಯ ಮೇಲೆ ಕಣ್ಣು ಹಾಕಿದ್ದಾನೆ. ಓಗೋ ಕಂಪನಿಯ ಆಕ್ಟಿವಾಗಳನ್ನು ಕಳ್ಳತನ ಮಾಡಲು ತುಮಕೂರಿನ ಗೆಳೆಯ ನಂದನ್ ನನ್ನು ಸಂಪರ್ಕಿಸಿದ್ದಾನೆ. ಅದರಂತೆ ಇಬ್ಬರು ಜೊತೆಗೂಡಿ ಪ್ಲಾನ್ ರೂಪಿಸಿ ಓಗೋ ಕಂಪನಿ ಪಾರ್ಕಿಂಗ್ ಸ್ಥಳಗಳನ್ನು ಗುರುತಿಸಿ ಬೈಕ್ ನಲ್ಲಿದ್ದ ಜಿಪಿಎಸ್ ಸಿಸ್ಟಮ್ ಡಿಸ್ ಕನೆಕ್ಟ್ ಮಾಡುತ್ತಿದ್ದರು.

Also Read  ಎಂ.ಟೆಕ್ ಇನ್ ಟೂಲ್ ಇಂಜಿನಿಯರಿಂಗ್ ಪ್ರವೇಶಕ್ಕೆ ಅರ್ಜಿ ಆಹ್ವಾನ

error: Content is protected !!
Scroll to Top