(ನ್ಯೂಸ್ ಕಡಬ) newskadaba.com ಕೋಲ್ಕತ್ತಾ, ಡಿ. 17. ಸುಮಾರು ಐದು ನಿಮಿಷಗಳ ಕಾಲ ಕೋಲ್ಕತ್ತಾದ ಆಕಾಶದಲ್ಲಿ ಚಲಿಸುತ್ತಿರುವ ನಿಗೂಢ ಬೆಳಕೊಂದು ಕಾಣಿಸಿಕೊಂಡಿದೆ. ಬೆಳಕಿನ ಮೂಲವನ್ನು ಇದುವರೆಗೂ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಎಂದು ವರದಿ ತಿಳಿಸಿದೆ.
ಇದು ಉಲ್ಕೆಯ ಭಾಗವೇ, ಉಪಗ್ರಹವೇ ಅಥವಾ ಕ್ಷಿಪಣಿಯೇ ಎಂಬುವುದರ ಬಗ್ಗೆ ತಜ್ಞರಿಗೆ ಇನ್ನೂ ಖಚಿತ ಮಾಹಿತಿ ತಿಳಿದು ಬಂದಿಲ್ಲ. ಸಂಜೆ 5.50 ರಿಂದ 5.55 ರವರೆಗೆ ಕೋಲ್ಕತ್ತಾದಲ್ಲಿ ಮಾತ್ರವಲ್ಲದೇ ಬಂಕುರಾ, ಪೂರ್ವ ಮತ್ತು ಪಶ್ಚಿಮ ಮಿಡ್ನಾಪುರ, ಉತ್ತರ ಮತ್ತು ದಕ್ಷಿಣದ 24 ಪರಗಣಗಳು, ಹೌರಾ, ಹೂಗ್ಲಿ, ಒಡಿಶಾ ಹಾಗೂ ಇನ್ನೂ ಕೆಲವು ಜಿಲ್ಲೆಗಳಲ್ಲಿ ಈ ವಿಚಿತ್ರ ಬೆಳಕು ಗೋಚರಿಸಿದೆ ಎನ್ನಲಾಗಿದೆ.