ವಾಟರ್ ಟ್ಯಾಂಕ್ ನೊಳಗೆ ಬಿದ್ದು 30 ಕ್ಕೂ ಅಧಿಕ ಕೋತಿಗಳು ಮೃತ್ಯು..!       

(ನ್ಯೂಸ್ ಕಡಬ) newskadaba.com ಕಲಬುರಗಿ, ಡಿ. 17. ಬಳಕೆಯಲ್ಲಿ ಇಲ್ಲದ ವಾಟರ್‌ ಟ್ಯಾಂಕ್‌ನಲ್ಲಿ 30ಕ್ಕೂ ಅಧಿಕ ಕೋತಿಗಳು ಬಿದ್ದ ಪರಿಣಾಮ ಆಹಾರವಿಲ್ಲದೆ ಬಳಲಿ ಮೃತಪಟ್ಟ ಘಟನೆ ಇಲ್ಲಿನ ಚಿತ್ತಾಪುರ ತಾಲೂಕಿನ ಹಲಕರ್ಟಿ ಗ್ರಾಮದಲ್ಲಿ ನಡೆದಿದೆ.

ಬಳಕೆಯಲ್ಲಿಲ್ಲದ ಶೀಥಿಲಾವಸ್ಥೆಯ ಟ್ಯಾಂಕ್ ನೊಳಗೆ ನೀರಿಗಾಗಿ ಕೆಲವು ಕೋತಿಗಳು ಜಿಗಿದಿದ್ದವು. ಈ ವೇಳೆ ಮೇಲೆ ಬರಲು ಎಷ್ಟೇ ಶ್ರಮ ವಹಿಸಿದ್ದರೂ ಸಾಧ್ಯವಾಗಿರಲಿಲ್ಲ. ಒಂದರಂತೆ ಇನ್ನೊಂದು ಈ ರೀತಿ 30 ಕ್ಕೂ ಹೆಚ್ಚು ಕೋತಿಗಳು ಟ್ಯಾಂಕ್ ನೊಳಗೆ ಬಿದ್ದು ಪರದಾಟ ನಡೆಸುತ್ತಿದ್ದವು. ಇದರಿಂದಾಗಿ ಆಹಾರವಿಲ್ಲದೇ ನಿತ್ರಾಣಗೊಂಡು ಕೋತಿಗಳು ಸಾವು ಕಂಡಿವೆ ಎಂದು ಹೇಳಲಾಗಿದೆ. ಗ್ರಾಮಸ್ಥರ ಗಮನಕ್ಕೆ ಬಂದಾಗ ಹಗ್ಗ ಇಳಿಬಿಟ್ಟು, ಹಲವು ಕೋತಿಗಳ ರಕ್ಷಣೆ ಮಾಡಿದ್ದಾರೆ. ಕೋತಿಗಳ ಸಾವಿನ ಹಿನ್ನಲೆ ಗ್ರಾಮದಲ್ಲೀಗ ಸಾಂಕ್ರಾಮಿಕ ರೋಗ ಭೀತಿ ಕೂಡ ಶುರುವಾಗಿದೆ ಎನ್ನಲಾಗಿದೆ.

Also Read  ಕಡಬ: ಸಂಪೂರ್ಣ ಹದಗೆಟ್ಟ ರಸ್ತೆ ➤ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರದ ಎಚ್ಚರಿಕೆ

error: Content is protected !!
Scroll to Top