(ನ್ಯೂಸ್ ಕಡಬ) newskadaba.com ಮೈಸೂರು, ಡಿ. 17. ವೇಶ್ಯಾವಾಟಿಕೆಗೆಂದು ಕರೆತರಲಾಗಿದ್ದ ಆಂಧ್ರ ಮೂಲದ ಅಪ್ರಾಪ್ತ ಬಾಲಕಿಯನ್ನು ಒಡನಾಡಿ ಸೇವಾ ಸಂಸ್ಡೆ, ನಗರ ಮಾನವ ಸಾಗಾಣಿಕೆ ನಿಗ್ರಹ ದಳ ಮತ್ತು ಜಿಲ್ಲಾ ಮಕ್ಕಳ ಪೊಲೀಸ್ ಘಟಕದ ಜಂಟಿ ಕಾರ್ಯಾಚರಣೆಯ ಮೂಲಕ ರಕ್ಷಿಸಿದ ಘಟನೆ ನಗರದ ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ನಡೆದಿದೆ.
ಆಂಧ್ರ ಮೂಲದ 15 ವರ್ಷದ ಅಪ್ರಾಪ್ತ ಬಾಲಕಿಯನ್ನು ರಕ್ಷಿಸಲಾಗಿದೆ. ಆಕೆ ಆಂಧ್ರದ ಅನಂತಪುರ ಜಿಲ್ಲೆಯಲ್ಲಿ ಒಂದು ವರ್ಷದಿಂದ ಲೈಂಗಿಕವಾಗಿ ವೇಶ್ಯಾವಾಟಿಕೆಗೆ ಬಲಿಯಾಗಿದ್ದಾಳೆ ಎಂದು ವಿಚಾರಣೆಯಲ್ಲಿ ತಿಳಿದು ಬಂದಿದೆ. ಕಳೆದ ಕಲವು ದಿನಗಳಿಂದ ಇಬ್ಬರು ಮಹಿಳೆಯರು ಈಕೆಯನ್ನು ತಮ್ಮ ಬಳಿ ಇಟ್ಟುಕೊಂಡಿದ್ದರು ಎಂದು ತನಿಖೆಯಲ್ಲಿ ತಿಳಿದು ಬಂದಿದೆ.