ಕೆರೆಗೆ ವಿಷ ಬೆರೆಸಿದ ಶಂಕೆ  ➤ ನೂರಾರು ಮೀನು ಮತ್ತು ಜಾನುವಾರುಗಳ ಸಾವು  

(ನ್ಯೂಸ್ ಕಡಬ) newskadaba.com ದಾವಣಗೆರೆ, ಡಿ. 17. ಇತ್ತೀಚೆಗೆ ಭರ್ಜರಿ ಮಳೆಯಾದ ಹಿನ್ನೆಲೆ ಜಗಳೂರು ತಾಲೂಕಿನ ಹಿರೇಅರಕೆರೆ ಗ್ರಾಮ ಕೆರೆ ಭರ್ತಿಯಾಗಿದ್ದು, 125 ಎಕರೆ ಪ್ರದೇಶದ ಕೆರೆಯಲ್ಲಿ ಮೂರು ಲಕ್ಷ ಮೀನಿನ ಮರಿಗಳನ್ನ ಬಿಡಲಾಗಿತ್ತು. ಆದ ಇಂತಹ ಮೀನುಗಳು ಸಾವನ್ನಪ್ಪಿ ತೇಲಾಡುತ್ತಿವೆ. ಸತ್ತ ಮೀನುಗಳನ್ನ ತಿಂದ ನಾಯಿಗಳು, ಕೆರೆ ನೀರು ಕುಡಿದ ಜಾನುವಾರುಗಳು ಕೂಡ ಸಾವನ್ನಪ್ಪುತ್ತಿವೆ ಎನ್ನಲಾಗಿದೆ.

ಬಸವರಾಜ್ ಎಂಬವರು ಸಣ್ಣ ನೀರಾವರಿ ಇಲಾಖೆಯಿಂದ ಗುತ್ತಿಗೆ ಪಡೆದು ಕೆರೆಯಲ್ಲಿ ಮೂರು ಲಕ್ಷ ಮೀನಿನ ಮರಿಗಳನ್ನ ಬಿಟ್ಟಿದ್ದರು. ಇದಕ್ಕಾಗಿ ಆರು ಲಕ್ಷ ರೂಪಾಯಿ ವೆಚ್ಚ ಮಾಡಿದ್ದರು ಎನ್ನಲಾಗಿದೆ. ಈ ರೀತಿ ಮೀನು ಸಾವನ್ನಪ್ಪುವುದಕ್ಕೆ ನೀರಿನಲ್ಲಿ ದುಷ್ಕರ್ಮಿಗಳ ವಿಷ ಹಾಕಿರುವ ಶಂಕೆ ವ್ಯಕ್ತವಾಗಿದೆ. ಹೀಗೆ ಕೆರೆ ನೀರಿನಲ್ಲಿ ವಿಷ ಹಾಕಿದ ಪರಿಣಾಮ ಮೀನುಗಳು‌ ಸಾವನ್ನಪ್ಪಿವೆ ಎಂದು ತಿಳಿದುಬಂದಿದೆ.

Also Read  ಮಂಗಳೂರಿನಲ್ಲಿ ವಾರ್ಡ್ ಸಮಿತಿ ರಚನೆಗೆ ಪರಿಷತ್ ನಲ್ಲಿ ಅನುಮೋದನೆ

error: Content is protected !!
Scroll to Top