ರಂಗಭೂಮಿ ಕಲಾವಿದ ಶೇಷಪ್ಪ ಚಿಟ್ಟಾ ರವರಿಗೆ ರಾಜ್ಯೋತ್ಸವ ರತ್ನ ಪ್ರಶಸ್ತಿ

(ನ್ಯೂಸ್ ಕಡಬ) newskadaba.com ಬೀದರ್, ಡಿ. 16. ನಗರದ ಪೂಜ್ಯ ಡಾ.ಚನ್ನಬಸವ ಪಟ್ಟದೇವರು ಜಿಲ್ಲಾ ರಂಗಮಂದಿರ ಬೀದರ್ ವಿಶ್ವ ಕನ್ನಡಿಗರ ಸಂಸ್ಥೆ ಕರ್ನಾಟಕ ಆಯೋಜಿಸಿದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ 3 ದಶಕಗಳ ರಂಗಭೂಮಿ ಸೇವೆಯಲ್ಲಿ ಪರಿಗಣಿಸಲಾದ ಶೇಷಪ್ಪ ಚಿಟ್ಟಾರವರಿಗೆ ಕರ್ನಾಟಕ ರಾಜ್ಯೋತ್ಸವ ರತ್ನ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು.

ಕರ್ನಾಟಕ ಪರಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷರಾದ ಡಾ.ವಿಶ್ವನಾಥ ಜಿ.ಪಿ, ಮಹೇಶ್ವರ ತಾತಾ, ಚಿತ್ರನಟಿ ಲಕ್ಷಿತಾ, ಪುಷ್ಪಾ ಹಿರೇಮಠ, ಹಿರಿಯ ಸಾಹಿತಿಗಳಾದ ಡಾ.ಎಂ.ಜಿ. ದೇಶಪಾಂಡೆ, ಸಮಾಜ ಸೇವಕರಾದ ಶಶಿಕುಮಾರ್ ಪೊಲೀಸ್ ಪಾಟೀಲ್, ವೀರ ಕನ್ನಡಿಗರ ಸೇನೆಯ ರಾಜಾಧ್ಯಕ್ಷರಾದ ಅಮೃತ ಪಾಟೀಲ್, ಸಂಸ್ಥೆಯ ಅಧ್ಯಕ್ಷರಾದ ಸುಬ್ಬಣ್ಣ ಕರಕನಳ್ಳಿ, ಶೇಷಪ್ಪಾ ಚಿಟ್ಟಾ ರವರಿಗೆ ಪ್ರಶಸ್ತಿ ಪ್ರಧಾನ ಮಾಡಿದರು. ಪ್ರಶಸ್ತಿ ನೀಡಿದಕ್ಕಾಗಿ ಸಂಸ್ಥೆಗೆ ಮತ್ತು ಪ್ರಶಸ್ತಿಯನ್ನು ಪಡೆದ ಶೇಷಪ್ಪ ಚಿಟ್ಟಾರವರಿಗೆ ಹಿರಿಯ ರಂಗಭೂಮಿ ಕಲಾವಿದರು ದೇವಿದಾಸ ಚಿಮಕೋಡ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

Also Read  ಅಪಾಯಕಾರಿ ಮರಗಳ ಕೊಂಬೆ ತೆರವುಗೊಳಿಸಲು ಗ್ರಾಮ ಪಂಚಾಯತ್ ಗೆ ಮನವಿ ಸಲ್ಲಿಸಿದ ಎಸ್ಡಿಪಿಐ

 

error: Content is protected !!
Scroll to Top