ಮೊಬೈಲ್ ಸ್ಫೋಟ ➤ ವಿದ್ಯಾರ್ಥಿ ಮೃತ್ಯು..!

(ನ್ಯೂಸ್ ಕಡಬ) newskadaba.com  ದಾವಣಗೆರೆ, ಡಿ. 16. ಮೊಬೈಲ್ ಸ್ಫೋಟಗೊಂಡ ಪರಿಣಾಮ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಜರ್ಮನಿಯಲ್ಲಿ ಸಂಭವಿಸಿದೆ.

ಮೃತನನ್ನು ದಾವಣಗೆರೆ ನಿವಾಸಿಯಾದ ಕೆ.ರೇವಪ್ಪ ಅವರ ಪುತ್ರ ಸಂತೋಷ್ ಕುಮಾರ್ ಕೆ .ಆರ್(30) ಎಂದು ಗುರುತಿಸಲಾಗಿದೆ. ಈತ ಜರ್ಮನಿಯ ಕೆಮ್ ನಿಟ್ಸ್ ವಿಶ್ವವಿದ್ಯಾಲಯದಲ್ಲಿ ಎಂ.ಎಸ್ ಓದುತ್ತಿದ್ದ ಈತ, ನಗರದ ಪಿ.ಜಿ. ಒಂದರಲ್ಲಿ ವಾಸವಾಗಿದ್ದ. ರಾತ್ರಿ ವೇಳೆ ಮೊಬೈಲ್ ಅನ್ನು ಜಾರ್ಜ್ ಗೆ ಇಟ್ಟಿದ್ದ ವೇಳೆ ಮೊಬೈಲ್ ಸ್ಫೋಟಗೊಂಡಿದ್ದು, ಇದರಿಂದ ಕೊಠಡಿಯಲ್ಲಿ ಹೊಗೆ ಆವರಿಸಿಕೊಂಡು ಉಸಿರುಗಟ್ಟಿ ಯುವಕ ಮೃತಪಟ್ಟಿದ್ದಾರೆ ಎನ್ನಲಾಗಿದೆ.

Also Read  ಕರ್ನಾಟಕ – ಕೇರಳ ಗಡಿ ಸದ್ಯಕ್ಕೆ ಓಪನ್ ಇಲ್ಲ...!!! ➤ ಜಿಲ್ಲಾಧಿಕಾರಿ ಸಿಂಧು ರೂಪೇಶ್

error: Content is protected !!
Scroll to Top