ಬೆಂಗಳೂರು: ಹೆಚ್ಚಿದ ಡೆಂಗ್ಯೂ, ಝಿಕಾ ವೈರಸ್ ಆತಂಕ  ➤ ಎಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆ ಸೂಚನೆ     

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 16. ರಾಜ್ಯದಲ್ಲಿ ಡೆಂಗೀ ಹಾಗೂ ಝಿಕಾ ವೈರಸ್ ಕುರಿತು ಆತಂಕ ಹೆಚ್ಚಾಗಿದ್ದು, ಈ ಸಂಬಂಧ ಎಚ್ಚರಿಕೆ ವಹಿಸುವ ಹಾಗೂ ಹರಡುವಿಕೆ ನಿಯಂತ್ರಿಸಲು ರಾಜ್ಯ ಆರೋಗ್ಯ ಇಲಾಖೆ ಕೆಲವು ಕ್ರಮಗಳನ್ನು ಬಿಡುಗಡೆ ಮಾಡಿದೆ.

ಸೊಳ್ಳೆ ಪರದೆಯ ಕೆಳಗೆ ಮಲಗುವುದು, ಸೊಳ್ಳೆ ನಿವಾರಕಗಳನ್ನು ಬಳಸುವುದು ಮತ್ತು ಆದಷ್ಟು ಮುಚ್ಚುವ ಬಟ್ಟೆಗಳನ್ನು ಧರಿಸುವುದು ಹಾಗೂ ಹೆಚ್ಚು ಸೋಂಕಿರುವ ಪ್ರದೇಶಗಳಿಗೆ ಪ್ರಯಾಣವನ್ನು ಮುಂದೂಡುವಂತೆ ಆರೋಗ್ಯ ಇಲಾಖೆ ಸಲಹೆ ನೀಡಿದೆ. ರಾಜ್ಯದಲ್ಲಿ ಮೊದಲ ಝಿಕಾ ವೈರಸ್ ಪ್ರಕರಣ ಕಾಣಿಸಿಕೊಂಡಿತ್ತು. ಡೆಂಘೀ ಜ್ವರಕ್ಕೆ ಕಾರಣವಾಗುವ ಈಡಿಸ್ ಈಜಿಪ್ಟ್ ಜಾತಿಯ ಸೊಳ್ಳೆ ಕಚ್ಚುವುದರಿಂದಲೇ ಝಿಕಾ ವೈರಸ್ ಸೋಂಕು ಕೂಡ ಹರಡುತ್ತದೆ ಎನ್ನಲಾಗಿದೆ. ದಿಢೀರ್ ಜ್ವರ, ತಲೆನೋವು, ಮೂಗಿನಲ್ಲಿ ಸೋರುವುದು, ಗಂಟು ನೋವು, ವಾಂತಿ, ಹೊಟ್ಟೆ ನೋವು, ತೋಳು, ಮೈ-ಕೈ ನೋವು, ಅತಿಸಾರ ರೀತಿಯ ಹಲವು ಗಂಭೀರ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಎಂದು ವೈದ್ಯರು ತಿಳಿಸಿದ್ದಾರೆ ಎಂದೆನ್ನಲಾಗಿದೆ.

Also Read  ಜ್ಯೋತಿಷ್ಯದ ಪ್ರಕಾರ ಈ ರಾಶಿಯವರು ಹೆಚ್ಚು ಪ್ರೀತಿಸುತ್ತಾರೆ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಶಾಶ್ವತ ಪರಿಹಾರ ಆಗುತ್ತದೆ

error: Content is protected !!