ಮಂಗಳೂರು: ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ !!!                   

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 16. ಅಪರಿಚಿತ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಮಂಗಳೂರಿನಲ್ಲಿ ನಡೆದಿದೆ. ವಾರಸುದಾರರು ಇದ್ದಲ್ಲಿ ಮಂಗಳೂರು ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.

ಇವರ ಹೆಸರು, ವಿಳಾಸ ತಿಳಿದಿಲ್ಲ. ಪ್ರಾಯ ಸುಮಾರು 45-50 ವರ್ಷ ಇರಬಹುದು ಎಂದು ಅಂದಾಜಿಸಲಾಗಿದೆ. ಎತ್ತರ 5 ಅಡಿ 4 ಇಂಚು, ಬಡಕಲು ಶರೀರ, ಸುಮಾರು 3 ಇಂಚು ಉದ್ದದ ಕಪ್ಪು ಬಿಳಿ ಮಿಶ್ರಿತ ತಲೆಕೂದಲು, 4 ಇಂಚು ಉದ್ದ ಕಪ್ಪು ಬಿಳಿ ಮಿಶ್ರಿತ ಗಡ್ಡ ಮೀಸೆ, ಗೋಧಿ ಮೈಬಣ್ಣ, ಆಪರೇಷನ್ ಮಾಡಿದ ಹಳೆಗಾಯ ಕಣ್ಣಿನ ಎರಡು ಬದಿಯಲ್ಲಿ ಹಾಗೂ ಮುಖದ ಮೇಲೆ ಬಿದ್ದಾಗ ಆದ ತರಚಿದ ಗಾಯ, ಬಿಳಿ ಬಣ್ಣದ ತೋಳಿನ ಅಂಗಿ, ಕೆಂಪು ಹಸಿರು ಮಿಶ್ರಿತ ಚೌಕುಳಿಗಳಿರುವ ಲುಂಗಿ ಧರಿಸಿರುತ್ತಾರೆ ಎನ್ನಲಾಗಿದೆ.

Also Read  ಕಡಬ: ಬಲಾತ್ಕಾರವಾಗಿ ಅತ್ಯಾಚಾರಗೈದುದರಿಂದ ಗರ್ಭಿಣಿಯಾದ 13ರ ಹರೆಯದ ಬಾಲಕಿ ➤ ಪೋಕ್ಸೋ ಕಾಯ್ದೆಯಡಿ ಆರೋಪಿಯ ಬಂಧನ

 

error: Content is protected !!
Scroll to Top