(ನ್ಯೂಸ್ ಕಡಬ) newskadaba.com ಪುತ್ತೂರು, ಡಿ. 16. ರಸ್ತೆ ದಾಟುತ್ತಿದ್ದ ವೇಳೆ ವಿದ್ಯಾರ್ಥಿಯೋರ್ವನಿಗೆ ಕಾರೊಂದು ಡಿಕ್ಕಿಯಾದ ಘಟನೆ ಹಾರಾಡಿಯಲ್ಲಿ ಸಂಭವಿಸಿದೆ.
ಶಾಲಾ ವಿದ್ಯಾರ್ಥಿಯು ರಸ್ತೆ ದಾಟುತ್ತಿದ್ದ ವೇಳೆ ಉಪ್ಪಿನಂಗಡಿ ಕಡೆಯಿಂದ ಪುತ್ತೂರಿಗೆ ಬರುತ್ತಿದ್ದ ಕಾರೊಂದು ಆಕೆಗೆ ಡಿಕಿಯಾಗಿದ್ದು, ಗಾಯಗೊಂಡ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ವಾಹನಗಳ ದಟ್ಟಣೆ ಹೆಚ್ಚಾಗಿದ್ದು ಶಾಲಾ ವಿದ್ಯಾರ್ಥಿಗಳು ರಸ್ತೆ ದಾಟುವ ವೇಳೆ ರಸ್ತೆ ವಿಭಜಕದಲ್ಲಿ ಗೊಂದಲವುಂಟಾಗಿ ಅತ್ತಿಂದಿತ್ತ ಬರುವ ವಾಹನಗಳನ್ನು ಗಮನಿಸಲಾರದೇ ಅನೇಕ ಬಾರಿ ಸಣ್ಣ ಪುಟ್ಟ ಅಪಘಾತಕ್ಕೀಡಾಗುತ್ತಿದೆ.