ಪರವಾನಿಗೆ ಪಡೆಯದೆ ಡ್ರೋನ್ ಬಳಸುವಂತಿಲ್ಲ ➤ಡಿಸಿಪಿ ಎಚ್ಚರಿಕೆ

(ನ್ಯೂಸ್ ಕಡಬ) newskadaba.com ಮಂಗಳೂರು ,ಡಿ .15 : ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಒಪ್ಪಿಗೆ ಪಡೆಯದೆ ಡ್ರೋನ್  ಹಾರಾಟ ನಡೆಸಿದಲ್ಲಿ ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ  ಕೈಗೊಳ್ಳಲಾಗುತ್ತದೆ ಎಂದು ಡಿಸಿಪಿ ಎಚ್ಚರಿಕೆ ನೀಡಿದ್ದಾರೆ.

ಕಮಿಷನರೇಟ್ ವ್ಯಾಪ್ತಿಯಲ್ಲಿ ಡ್ರೋನ್ ಹಾರಾಟಕ್ಕೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ ಒಪ್ಪಿಗೆ ಪಡೆಯಬೇಕಿದೆ. ಆದರೆ ನಗರದಲ್ಲಿ DGCA DIGITAL SKY PLATFORM ನಲ್ಲಿ ರಿಜಿಸ್ಟ್ರಾರ್ ಆಗದೇ ಅನಧಿಕೃತವಾಗಿ ಡ್ರೋನ್ ಬಳಸುವಂತಿಲ್ಲ. ಆದ್ದರಿಂದ ಭದ್ರತಾ ಮತ್ತು ಸಾರ್ವಜನಿಕರ ಸುರಕ್ಷತೆಯನ್ನು ಕಾಪಾಡುವ ದೃಷ್ಟಿಯಿಂದ  DGCA ಯಿಂದ ಒಪ್ಪಿಗೆ ಪಡೆದ NANO DRONE ಗಳನ್ನು ಹೊರತುಪಡಿಸಿ ಇನ್ನುಳಿದ ಡ್ರೋನ್ ಬಳಸಲು ಕಮಿಷನರೇಟ್ ಕಚೇರಿಯಿಂದ ಕಡ್ಡಾಯವಾಗಿ ಅನುಮತಿ  ಪಡೆಯಬೇಕು ಎಂದು ಅವರು ತಿಳಿಸಿದ್ದಾರೆ. ಸೂಕ್ತ ದಾಖಲೆಗಳನ್ನು ನೀಡಿದಲ್ಲಿ ಒಂದು ತಿಂಗಳು ಡ್ರೋನ್ ಬಳಸಲು ಅನುಮತಿ ನೀಡಲಾಗುತ್ತದೆ. ಆದರೂ ಡ್ರೋನ್ ಹಾರಿಸುವ ಮುಂಚೆ ಈ ರೀತಿ ಪಡೆದ ಅನುಮತಿ ಪತ್ರವನ್ನು ತೋರಿಸಿ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Also Read  ರಾಜ್ಯದಲ್ಲಿ ಡ್ರಗ್ಸ್ ದಂಧೆ:  ಪೇನ್ ಕಿಲ್ಲರ್ ಮಾತ್ರೆಗಳಿಂದ ಆತಂಕ

error: Content is protected !!
Scroll to Top