ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಂಪ್ರದಾಯಿಕ ಮರಳುಗಾರಿಕೆಗೆ ಅನುಮತಿ ➤ ಜಿಲ್ಲಾಧಿಕಾರಿ ಆದೇಶ

(ನ್ಯೂಸ್ ಕಡಬ) newskadaba.com ದಕ್ಷಿಣ ಕನ್ನಡ, ಡಿ. 15. ಜಿಲ್ಲೆಯಲ್ಲಿ ಸಾಂಪ್ರದಾಯಿಕ ಮರಳುಗಾರಿಕೆಗೆ ಯಾವುದೇ ಯಂತ್ರ ಬಳಸದೆ ಮಾನವನ ಶ್ರಮದ ಮೂಲಕವೇ ನಡೆಸಲು ಆದೇಶ ನೀಡಲಾಗಿದೆ.

ನೇತ್ರಾವತಿ ಮತ್ತು ಫಲ್ಗುಣಿ ನದಿಗಳ ಮರಳು ದಿಬ್ಬಗಳನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತವು ಮರಳುಗಾರಿಗೆಕೆ ಅನುಮತಿ ನೀಡಿದೆ. ಮರಳು ದಿಬ್ಬ ತೆರವುಗೊಳಿಸಲು ಜಿಲ್ಲಾಡಳಿತವು ಒಟ್ಟು 14 ಸ್ಥಳಗಳನ್ನು ಗುರುತಿಸಿದೆ. ಮೇ ತಿಂಗಳಲ್ಲಿ ಕರೆದ ಡೆಂಡರ್ ಪ್ರಕ್ರಿಯೆಗೆ 282 ಅರ್ಜಿಗಳು ಬಂದಿದ್ದು, ಆದರ ಪೈಕಿ 202 ಅರ್ಜಿಗಳನ್ನು ಗುರುತಿಸಲಾಗಿತ್ತು. ಆರಂಭದಲ್ಲಿ 148 ಮಂದಿಗೆ ಮಾತ್ರ ಮರಳುಗಾರಿಕೆಗೆ ಪರವಾನಿಗೆ ನೀಡಲಾಗಿದೆ. ಉಳಿದ  ಅರ್ಜಿಗಳನ್ನು ವಿಲೇವಾರಿ ಮಾಡುವ ಮುನ್ನ ಹಸಿರು ನ್ಯಾಯ ಮಂಡಳಿಯು ಮರಳುಗಾರಿಕೆಗೆ ನಿಷೇಧ ಹೇರಿ ಆದೇಶ ಹೊರಡಿಸಿದ್ದರಿಂದ ಮರಳುಗಾರಿಕೆಗೆ ತಡೆಯಾಗಿತ್ತು. ಇತ್ತೀಚೆಗೆ ಜಿಲ್ಲಾಧಿಕಾರಿಯವರ ನೇತೃತ್ವದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ 7 ಮಂದಿಯ ಸಮಿತಿ ಸದಸ್ಯರೊಂದಿಗೆ ನಡೆದ ಸಭೆಯಲ್ಲಿ ಎರಡು  ನದಿಗಳನ್ನು ಗುರುತಿಸಿ ಪ್ರದೇಶಗಳಲ್ಲಿ ಮರಳುಗಾರಿಕೆ ಸಡೆಸಲು ಅನುಮತಿ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ. ಹೀಗಾಗಿ ಉಳಿದ 54 ಅರ್ಜಿಗಳನ್ನು ವಿಲೇವಾರಿ ಮಾಡಿ ಒಟ್ಟು 202 ಮಂದಿಗೆ ಮರಳುಗಾರಿಕೆ ನಡೆಸಲು ಅನುಮತಿಸಲಾಗಿದೆ. ಮುಂದಿನ ವಾರದಿಂದ ಮರಳುಗಾರಿಕೆ ಆರಂಭವಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

Also Read  ಅತಿಥಿ ಉಪನ್ಯಾಸಕರ ನೇಮಕ

error: Content is protected !!
Scroll to Top