ಮದ್ಯ ಸೇವನೆಗೆ ಹಣ ನೀಡಿಲ್ಲವೆಂದು ಮಹಿಳೆಯ ಹತ್ಯೆ   ➤ ಆರೋಪಿ ಪೊಲೀಸ್ ಬಲೆಗೆ  

(ನ್ಯೂಸ್ ಕಡಬ) newskadaba.com ಮುಂಬೈ, ಡಿ. 15. ಮದ್ಯ ಸೇವನೆಗೆ ಹಣ ನೀಡಿಲ್ಲವೆಂದು ವ್ಯಕ್ತಿಯೋರ್ವ ನೆರೆಮನೆಯ ಮಹಿಳೆಯನ್ನು ಹತ್ಯೆಗೈದ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ಸಂಭವಿಸಿದೆ.

ಮೃತ ಮಹಿಳೆಯನ್ನು ವೈಶಾಲಿ ಮಸೂದ್ ಎಂದು ಗುರುತಿಸಲಾಗಿದೆ. ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯು ವೈಶಾಲಿ ಮಸೂದ್ ಅವರಿಂದ ಆಗಾಗ್ಗೆ ಹಣ ಪಡೆಯುತ್ತಿದ್ದ ಎಂದು ತಿಳಿದುಬಂದಿದೆ. ಹಣ ನೀಡಲು ನಿರಾಕರಿಸಿದಾಗ ಆಕ್ರೋಶಗೊಂಡ ವ್ಯಕ್ತಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.

error: Content is protected !!
Scroll to Top