ಕೊತ್ತಂಬರಿ ಸೊಪ್ಪಿನ ಜೊತೆ ಗಾಂಜಾ ಗಿಡದ ಬೆಳೆದ ಭೂಪ ➤ ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಹನೂರು , ಡಿ 15 : ವ್ಯಕ್ತಿಯೋರ್ವ ಕೊತ್ತಂಬರಿ ಸೊಪ್ಪು ಬೆಳೆಯ ಜೊತೆ ಅಕ್ರಮವಾಗಿ ಗಾಂಜಾ ಗಿಡವನ್ನು ಬೆಳೆಸಿದ್ದ ಘಟನೆ ಚಿಕ್ಕಮಾಲಾಪುರ ಗ್ರಾಮದಲ್ಲಿ ಸಂಭವಿಸಿದೆ.

ಬಂಧಿತನನ್ನು ಹನುಮೇಗೌಡ(40) ಎಂದು ಗುರುತಿಸಲಾಗಿದೆ. ಈತ ಚಿಕ್ಕಮಾಲಾಪುರ ಗ್ರಾಮದಲ್ಲಿರುವ ಸರೋಜಮ್ಮ ಕೋಂ ಲೇಟ್ ಬಸವಣ್ಣ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಕೊತ್ತಂಬರಿ ಸೊಪ್ಪುನ ಬೆಳೆಯ ಜೊತೆ ಅಕ್ರಮವಾಗಿ ಗಾಂಜಾ ಗಿಡವನ್ನು ಬೆಳೆಯುತ್ತಿದ್ದ ಅಬಕಾರಿ ಪೊಲೀಸ್ ಇನ್ ಸ್ಪೆಕ್ಟರ್ ಸುನೀಲ್ ನೇತೃತ್ವದ ತಂಡ ಈ ದಾಳಿ ನಡೆಸಿದೆ. ಆರೋಪಿಯನ್ನು ನ್ಯಾಯಾಂಗ  ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಬಕಾರಿ ಪೊಲೀಸರು ತಿಳಿಸಿದ್ದಾರೆ.

Also Read  ಖರೀದಿಸಿದ ಎರಡೇ ತಿಂಗಳಲ್ಲಿ ಕೆಟ್ಟು ಹೋದ ಮಗನ ಹೊಸ ಬೈಕ್ ► ಶೋ ರೂಮ್ ಮುಂದೆ ವಿಷ ಕುಡಿದ ತಾಯಿ..!!!

 

error: Content is protected !!
Scroll to Top