ಫಿಫಾ ವಿಶ್ವಕಪ್ ➤ ಫೈನಲ್ ಪ್ರವೇಶಿಸಿದ ಫ್ರಾನ್ಸ್

(ನ್ಯೂಸ್ ಕಡಬ) newskadaba.com  ಹೊಸದಿಲ್ಲಿ ,ಡಿ 15 : ಫಿಪಾ ವಿಶ್ವಕಪ್ ಫೈನಲ್ ತಲುಪುವ ಮೊರಾಕ್ಕೊ ಕನಸನ್ನು ನುಚ್ಚು ನೂರು ಮಾಡಿದ ಫ್ರಾನ್ಸ್, ಪ್ರಶಸ್ತಿಗಾಗಿ ಲಿಯೊನಾಲ್ ಮೆಸ್ಸಿ ನೇತೃತ್ವದ  ಅರ್ಜೆಂಟೀನಾ ಜತೆ ಹೋರಾಟಕ್ಕೆ ಅರ್ಹತೆ ಪಡೆದಿದೆ.

ಅಲ್ ಬೈತ್ ಸ್ಟೇಡಿಯಂ ನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಮೊರಾಕ್ಕೊ ತಂಡವನ್ನು 2-0 ಅಂತರದಲ್ಲಿ ಸೋಲಿಸಿ ಹಾಲಿ ಚಾಂಪಿಯನ್ನರು ರವಿವಾರ ಪ್ರಶಸ್ತಿನ ಕದನಕ್ಕೆ ಸಜ್ಜಾಗಿದ್ದಾರೆ.

2002ರ  ಬಳಿಕ ಫೈನಲ್ ಗೆ ತಲುಪಿದ ಹಾಲಿ ಚಾಂಪಿಯನ್  ಎಂಬ ಹೆಗ್ಗಳಿಕೆಗೂ ಪಾತ್ರವಾಗಿರುವ ಫ್ರಾನ್ಸ್ ಇನ್ನೊಂದು ದಾಖಲೆಗೆ ಕಣ್ಣಿಟ್ಟಿದೆ. ಅಲ್ಲದೇ ಸತತ ಎರಡು ವಿಶ್ವಕಪ್ ಗಳಲ್ಲಿ ಪ್ರಶಸ್ತಿ ಗೆದ್ದ ಮೂರನೇ ತಂಡ ಎನಿಸಿಕೊಳ್ಳುವ ಕನಸು ಕಾಣುತ್ತಿದೆ. ಶನಿವಾರ ನಡೆಯುವ ಪ್ಲೇಆಫ್ ಪಂದ್ಯದಲ್ಲಿ ಮೊರಾಕ್ಕೊ ತಂಡ ಕಳೆದ ಬಾರಿಯ ರನ್ನರ್ಸ್ ಅಪ್ ಕ್ರೊವೇಶಿಯಾ ವಿರುದ್ಧ ಮೂರನೇ ಸ್ಥಾನಕ್ಕಾಗಿ ಸೆಣೆಸಲಿದೆ.

Also Read  ನಾಪತ್ತೆಯಾಗಿದ್ದ ಪರ್ವತಾರೋಹಿ ➤ 50 ವರ್ಷಗಳ ಬಳಿಕ ಮೃತದೇಹ ಪತ್ತೆ..!

error: Content is protected !!
Scroll to Top