ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 12 ‘ನಮ್ಮ ಕ್ಲಿನಿಕ್’ ಲೋಕಾರ್ಪಣೆ

(ನ್ಯೂಸ್ ಕಡಬ) newskadaba.com ಮಂಗಳೂರು , ಡಿ 15 : ರಾಜ್ಯ ಸರ್ಕಾರ ನೂತನವಾಗಿ ಆರಂಭಿಸಿರುವ ‘ನಮ್ಮ ಕ್ಲಿನಿಕ್’ ನ್ನು ದ.ಕ. ಜಿಲ್ಲೆಯ 12 ಕಡೆ ನಿರ್ಮಾಣ ಮಾಡಲಾಗಿದೆ.

ಮಂಗಳೂರು ನಗರ ಸೇರಿ ಗ್ರಾಮೀಣ ಪ್ರದೇಶಗಳಲ್ಲೂ ನಮ್ಮ ಕ್ಲಿನಿಕ್ ನ್ನು ತೆರೆಯಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ನಗರದ ಸೂಟರ್ಪೇಟೆಯ 6ನೇ ಆಡ್ಡ ರಸ್ತೆಯಲ್ಲಿರುವ ಸಮಾಜ ಭವನದಲ್ಲಿ ನಮ್ಮ ಕ್ಲಿನಿಕ್ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಪಂ ಸಿಇಒ ಡಾ. ಕುಮಾರ್, ಆರೋಗ್ಯದ ಬಲವರ್ಧನೆಗೆ, ಮನೆಯ ಬಾಗಿಲಲ್ಲಿಯೇ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಈ ರೀತಿಯ ಕ್ರಮ ಕೈಗೊಂಡಿದೆ. ಜನಸಾಮಾನ್ಯರಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ನಿರಂತರವಾಗಿ ನೀಡಲು ರಾಜ್ಯದ 114 ನಮ್ಮ ಕ್ಲಿನಿಕ್ ಗಳನ್ನು ಮುಖ್ಯಮಂತ್ರಿಗಳು ಏಕಕಾಲದಲ್ಲಿ ಲೋಕಾರ್ಪಣೆ ಮಾಡಿದ್ದಾರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 12 ಕ್ಲಿನಿಕ್ ಗಳನ್ನು ಲೋಕಾರ್ಪಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

Also Read  ಇಚಿಲಂಪಾಡಿ: ಚರ್ಚಿಗೆ ನುಗ್ಗಿದ ಕಳ್ಳರು

error: Content is protected !!
Scroll to Top