ನಕಲಿ ದಾಖಲೆ ಸೃಷ್ಟಿಸಿ 1.25 ಕೋಟಿ ವಂಚನೆ ➤ ಮಗಳ ವಿರುದ್ದ ದೂರು ದಾಖಲಿಸಿದ ತಾಯಿ  

 (ನ್ಯೂಸ್ ಕಡಬ) newskadaba.com  ಮಂಗಳೂರು, ಡಿ. 15. ನಕಲಿ ದಾಖಲೆ ಸೃಷ್ಟಿಸಿ ತಾಯಿಗೆ, ಮಗಳು ಮತ್ತು ಆಕೆಯ ಸ್ನೇಹಿತೆ ಸೇರಿ 1.25 ಕೋಟಿ ರೂಪಾಯಿ ವಂಚಿಸಿದ ಘಟನೆ ಮಂಗಳೂರಿನಲ್ಲಿ ಸಂಭವಿಸಿದೆ.

ಈ ಕುರಿತು ತಾಯಿ ರೀಟಾ ಪೇರಿಸ್‌ ದೂರು ನೀಡಿದ್ದು ಅವರ ಪುತ್ರಿ ನಿಕಿತಾ ಪೇರಿಸ್‌ ಮತ್ತು ಗೋಡ್ವಿನ್‌ ಫೆರ್ನಾಂಡಿಸ್‌ ಆರೋಪಿಗಳಾಗಿದ್ದಾರೆ. ದೂರಿನ ಪ್ರಕಾರ ರೀಟಾ ಪೇರಿಸ್‌ ಮತ್ತು ಅವರ ಪುತ್ರ ಅಮಿತ್‌ ಪೇರಿಸ್‌ ವಿದೇಶದಲ್ಲಿ ನೆಲೆಸಿದ್ದು, ರೀಟಾ ಪೇರಿಸ್‌ ಅವರ ಪುತ್ರಿ ನಿಕಿತಾ ಪೇರಿಸ್‌ ಮುದರಂಗಡಿಯ ಗೋಡ್ವಿನ್‌ ಫೆರ್ನಾಂಡಿಸ್‌ನ ಜತೆ ಸೇರಿಕೊಂಡು ವಂಚಿಸಿರುವುದಾಗಿ ತಿಳಿಸಲಾಗಿದೆ. ಉಡುಪಿಯ ವಕೀಲರಿಂದ ನಕಲಿ ಜನರಲ್ ಪವರ್ ಆಫ್ ಅಟಾರ್ನಿ ಸೃಷ್ಟಿಸಲಾಗಿದೆ ಎಂದು ಆರೋಪಿಸಲಾಗಿದ್ದು ರೀಟಾ ಪೇರಿಸ್‌ ಮತ್ತು ಅಮಿತ್‌ ಪೇರಿಸ್‌ ಅವರ ನಕಲಿ ಸಹಿ ಮಾಡಿ ಬ್ಯಾಂಕ್‌ ಮ್ಯಾನೇಜರ್‌ಗೆ ದಾಖಲಾತಿ ನೀಡಿ ಫ್ಲ್ಯಾಟಿನ ಮೇಲೆ 25 ಲ.ರೂ. ಗೃಹಸಾಲ ಪಡೆದಿದ್ದಾರೆ. ನಂತರ ನಕಲಿ ಸಹಿ ಮಾಡಿದ ದಾಖಲೆ ನೀಡಿ ವಾಮಂಜೂರಿನ ಬ್ಯಾಂಕ್‌ ಖಾತೆಯ ಲಾಕರ್‌ನಲ್ಲಿದ್ದ ರೀಟಾ ಪೇರಿಸ್‌ ಅವರಿಗೆ ಸೇರಿದ 1 ಕೋ.ರೂ. ಮೌಲ್ಯದ ಚಿನ್ನಾಭರಣಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಅಲ್ಲದೇ ನಕಲಿ ಸಹಿ ಮಾಡಿ ರೀಟಾ ಪೇರಿಸ್‌ ಅವರ ಬ್ಯಾಂಕ್‌ ಖಾತೆಯಲ್ಲಿದ್ದ ಹಣವನ್ನು ತೆಗೆದುಕೊಂಡು ಹೋಗಿ ವಂಚಿಸಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.

Also Read  ಹೆಚ್ಚು ಹಣ ಕೇಳಿದ್ದಕ್ಕೆ ಜಗಳ ➤ ಆಟೋ ಚಾಲಕನಿಂದ ಪ್ರಯಾಣಿಕನ ಕೊಲೆ

error: Content is protected !!
Scroll to Top