ಸೆಂಟ್ರಿಂಗ್ ಶೀಟು ಕಳ್ಳತನ ➤ ಆರು ಮಂದಿಯ ಬಂಧನ

crime, arrest, suspected

(ನ್ಯೂಸ್ ಕಡಬ) newskadaba.com ಬಂಗಾರಪೇಟೆ, ಡಿ. 15. ಮನೆಯ ಸೆಂಟ್ರಿಂಗ್ ಶೀಟುಗಳನ್ನು ಕಳವು ಮಾಡುತ್ತಿದ್ದ 6 ಆರೋಪಿಗಳನ್ನು ಪೊಲೀಸರು ಬಂಧಿಸಿದ ಘಟನೆ ಬಂಗಾರಪೇಟೆಯಲ್ಲಿ ನಡೆದಿದೆ.

 

ಬಂಧಿತರನ್ನು ಮಾಲೂರು ತಾಲ್ಲೂಕಿನ ಚಿಕ್ಕ ಕಡತೂರು ಗ್ರಾಮದ ಶ್ರೀಧರ್, ಸಂತೋಷ್, ಮಂಜುನಾಥ್, ಅವಿನಾಶ್, ಉಮೇಶ್ ಮತ್ತು ಚಿಕ್ಕ ಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಜೇಡರಹಳ್ಳಿಯ ಜೆ.ಎಂ. ಮನೋಜ್ ಎಂದು ಗುರುತಿಸಲಾಗಿದೆ. ಇವರು ಕೋಲಾರ, ಮಾಸ್ತಿ, ಬೇತಮಂಗಲ ವ್ಯಾಪ್ತಿಯಲ್ಲಿ ಶೀಟುಗಳನ್ನು ಕಳವು ಮಾಡಿ ಬೆಂಗಳೂರು ಕಡೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.

Also Read  ಪುತ್ತೂರು: ಅನಧಿಕೃತ ವೋಟರ್ ಐಡಿ ವಿತರಣೆ ಆರೋಪ ➤ ಜನಸೇವಾ ಕೇಂದ್ರಕ್ಕೆ ಎಸಿ ದಾಳಿ

error: Content is protected !!
Scroll to Top