60 ವರ್ಷ ಮೇಲ್ಟಟ್ಟವರಿಗೆ ಉಚಿತ ಆರೋಗ್ಯ ತಪಾಸಣೆ   ➤ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ                 

(ನ್ಯೂಸ್ ಕಡಬ) newskadaba.com ಹುಬ್ಬಳ್ಳಿ, ಡಿ. 15. 60 ವರ್ಷ ಮೇಲ್ಟಟ್ಟ ಪ್ರತಿಯೊಬ್ಬರ ಆರೋಗ್ಯವನ್ನು ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಜನವರಿಯಿಂದ ನೇತ್ರ ಚಿಕಿತ್ಸೆ, ಕನ್ನಡಕ, ಶ್ರವಣದೋಷವುಳ್ಳವರಿಗೆ ಸಲಕರಣೆ ನೀಡಲಾಗುವುದು ಹಾಗೂ ಉಚಿತ ತಪಾಸಣೆ ನಡೆಸಲಾಗುವುದು ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.

ಎಲ್ಲರಿಗೂ ಉತ್ತಮ ಆರೋಗ್ಯ ನೀಡಲು ಸರ್ಕಾರ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ನಗರ ಪ್ರದೇಶಗಳ ಬಡ, ದುರ್ಬಲ ವರ್ಗದ ಜನರಿಗೆ ಉಚಿತ ಆರೋಗ್ಯ ಸೇವೆ ನೀಡಲು ರಾಜ್ಯದಾದ್ಯಂತ ‘ನಮ್ಮ ಕ್ಲಿನಿಕ್’ ಗಳನ್ನು ತೆರೆಯಲಾಗುತ್ತಿದೆ ಎಂದಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, ಮಹಿಳೆಯರಿಗಾಗಿ ‘ಆಯುಷ್ಮತಿ ಕ್ಲಿನಿಕ್’ ಗಳನ್ನು ಮುಂದಿನ ವರ್ಷ ನಡೆಸಲಾಗುವುದು ಎಂದಿದ್ದಾರೆ.

Also Read  ಕಡ್ಯ-ಕೊಣಾಜೆ: ರೈತ ಕ್ಷೇತ್ರ ಪಾಠಶಾಲೆ

error: Content is protected !!
Scroll to Top