ಪತ್ನಿಯನ್ನು ಕೊಂದು 400 ಕಿಲೋ ಮೀಟರ್ ದೂರದಲ್ಲಿ ಸುಟ್ಟು ಹಾಕಿದ ಪತಿ

(ನ್ಯೂಸ್ ಕಡಬ) newskadaba.com  ಉತ್ತರ ಪ್ರದೇಶ, ಡಿ 14 : ವೈದ್ಯನೋರ್ವ ತನ್ನ ಪತ್ನಿಯನ್ನು ಕೊಂದು ಬಳಿಕ ಅವಳ ಮೃತದೇಹವನ್ನು 400 ಕಿಲೋ ಮೀಟರ್ ದೂರದಲ್ಲಿ ಸುಟ್ಟು ಹಾಕಿದ ಭೀಕರ ಘಟನೆ ಉತ್ತರ ಪ್ರದೇಶದಲ್ಲಿ ಸಂಭವಿಸಿದೆ.

ಮೃತರನ್ನು ವಂದನಾ ಆವಸ್ಥಿ(28) ಎಂದು ಗುರುತಿಸಲಾಗಿದೆ..ಆರೋಪಿ ಪತಿ ಅಭಿಷೇಕ್ ಆನಸ್ಥಿ ಸದ್ಯ ಪೊಲೀಸರ ವಶದಲ್ಲಿದ್ದಾರೆ. ಇಬ್ಬರು ಆಯುರ್ವೇದ ವೈದ್ಯರಾಗಿದ್ದ ಇವರಿಬ್ಬರಿಗೆ ಕೆಲವು ವರ್ಷಗಳ ಹಿಂದೆಯಷ್ಟೇ ಮದುವೆಯಾಗಿತ್ತು. ಈ ನಡುವೆ ಅವರಿಬ್ಬರಲ್ಲಿ ಹೊಂದಾಣಿಕೆ ಇಲ್ಲದೆ ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.  ಕುರಿತು ಪೊಲೀಸರು ವಿಚಾರಣೆ ನಡೆಸಿದಾಗ ಕೊಲೆ ನಡೆಸಲು ತನ್ನ ತಂದೆಯು ಸಹಕರಿಸಿರುವುದಾಗಿ ಒಪ್ಪಿಕೊಂಡಿದ್ದಾನೆ. ಸದ್ಯ ವೈದ್ಯ ಹಾಗು ಆತನ ತಂದೆ ಪೊಲೀಸರ ವಶದಲ್ಲಿದ್ದಾರೆ.

Also Read  ಕುಂಡಾಜೆ: ಕೋಮು ಘರ್ಷಣೆ ಪ್ರಕರಣ ► ಮೂವರ ಆರೋಪಿಗಳ ಬಂಧನ

error: Content is protected !!
Scroll to Top