ಬೆಳ್ತಂಗಡಿ : ಹೆಚ್ಚಿದ ಕಾಡಾನೆಗಳ ಹಾವಳಿ      ➤ ರಬ್ಬರ್ ತೋಟವೊಂದರಲ್ಲಿ ಕಾಣಿಸಿಕೊಂಡ ಆನೆ           

(ನ್ಯೂಸ್ ಕಡಬ) newskadaba.com   ಬೆಳ್ತಂಗಡಿ, ಡಿ.14  ಕಾಡಾನೆಗಳ ಹಾವಳಿ ನಿರಂತರವಾಗಿ ಹೆಚ್ಚಾಗುತ್ತಿದ್ದು, ಹಗಲು ಹೊತ್ತಿನಲ್ಲಿಯೇ ರಬ್ಬರ್ ತೋಟವೊಂದರಲ್ಲಿ ಕಾಣಿಸಿಕೊಂಡು ಜನರಲ್ಲಿ ಭಯ ಮೂಡಿಸಿದ ಘಟನೆ ಬೆಳ್ತಂಗಡಿಯಲ್ಲಿ ಸಂಭವಿಸಿದೆ.

ಎರಡು ದಿನಗಳ ಹಿಂದೆ ಅಣಿಯೂರಿನ ಪೇಟೆಯಲ್ಲಿಯೇ ಬೆಳಿಗ್ಗೆ ಒಂಟಿ ಸಲಗ ಕಾಣಿಸಿಕೊಂಡು ಜನರಲ್ಲಿ ಭಯ ಪಡುವಂತ ವಾತವರಣ ನಿರ್ಮಾಣವಾಗಿತ್ತು. ಇದೀಗ ಶಿಶಿಲದಲ್ಲಿ ಒಂಟಿ ಸಲಗವೊಂದು ಮಂಗಳವಾರ ಸಂಜೆಯ ವೇಳೆ ಜನವಸತಿ ಪ್ರದೇಶದ ನಡುವೆಯೇ ತಿರುಗಾಟ ನಡೆಸಿದ್ದು ಇಲ್ಲಿನ ಜನರಲ್ಲಿ ಭಯ ಮೂಡಿಸಿದೆ ಎನ್ನಲಾಗಿದೆ.

ಶಿಶಿಲ ಉಣ್ತಿಮಾರು ಎಂಬಲ್ಲಿನ ಲಕ್ಷ್ಮಣ್ ಎಂಬವರ ತೋಟದಲ್ಲಿ ಕಾಡಾನೆ ಕಾಣಿಸಿಕೊಂಡಿದ್ದು, ಕಾಡಾನೆಗಳ ಎರಡು ಮೂರು ಗುಂಪು ತಾಲೂಕಿನ ವಿವಿಧ ಭಾಗಗಳಲ್ಲಿ ತಿರುಗಾಟ ನಡೆಸುತ್ತಿರುವುದು ಕಂಡು ಬಂದಿದೆ ಎಂದು ತಿಳಿದುಬಂದಿದೆ.  ಒಂದೆಡೆಯಿಂದ ಕಾಡಾನೆ ಓಡಿಸುವ ಪ್ರಯತ್ನಗಳು ನಡೆಯುತ್ತಿರುವಾಗಲೇ ಮತ್ತೊಂದೆಡೆ ಕಾಡಾನೆಗಳ ಉಪಟಳ ಹೆಚ್ಚಾಗುತ್ತಿದ್ದು, ಕಾಡಾನೆಗಳನ್ನು ಓಡಿಸಲು ಕ್ರಮ ಕೈಗೊಳ್ಳವಂತೆ ಜನರು ಆಗ್ರಹಿಸಿದ್ದಾರೆ.

Also Read  ಯಾರೂ ವಿದ್ಯುತ್ ಬಿಲ್ ಕಟ್ಟಬೇಡಿ ಎಂದು ಕರೆ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ.!➤ನಳಿನ್ ಕುಮಾರ್ ಕಟೀಲ್ 

 

 

error: Content is protected !!
Scroll to Top