ಕಾರು ಢಿಕ್ಕಿ ➤ ಯಕ್ಷಗಾನ ಭಾಗವತ ತಿಮ್ಮಪ್ಪ ಬಾಳೆಹದ್ದ ಮೃತ್ಯು

(ನ್ಯೂಸ್ ಕಡಬ) newskadaba.com  ಯಲ್ಲಾಪುರ ,ಡಿ .14: ಎರಡು ಕಾರುಗಳ ನಡುವೆ ಭೀಕರ ಅಪಘಾತದ ಸಂಭವಿಸಿದ ಪರಿಣಾಮ ಯಕ್ಷಗಾನ ಭಾಗವತ ಓರ್ವರು  ಮೃತಪಪಟ್ಟ ಘಟನೆ ಯಲ್ಲಾಪುರದಲ್ಲಿ ನಡೆದಿದೆ.

ಮೃತರನ್ನು ತಿಮ್ಮಪ್ಪ ಭಾಗವತ ಬಾಳೆಹದ್ದ (59) ಗುರುತಿಸಲಾಗಿದೆ.ಇವರು ತಂದೆ, ಪ್ರಸಿದ್ದ ಭಾಗವತರಾಗಿದ್ದ ಕೃಷ್ಣ ಭಾಗವತ ಅವರ ಬಳಿ ಭಾಗವತಿಕೆ ಕಲಿತಿದ್ದರು. ಭಾವ ಶ್ರೀಪಾದ ಹೆಗಡೆ ಕಂಪ್ಲಿ ಅವರ ಬಳಿ ಸಂಗೀತ ಜ್ಞಾನ ಪಡೆದರು. ಹೊಸ್ತೋಟ ಮಂಜುನಾಥ ಭಾಗವತರ ಶಿಷ್ಯರಾಗಿದ್ದ ಇವರು ಸೋಂದಾದ ಯಕ್ಷಗಾನ ಬಳಗದಲ್ಲಿ ಗುರುತಿಸಿಕೊಂಡಿದ್ದರು. ಮೃತರು ಒಬ್ಬ ಪುತ್ರ ಹಾಗೂ ಒಬ್ಬ ಪುತ್ರಿ ಯನ್ನು ಆಗಲಿದ್ದಾರೆ.

Also Read  ಬೆಳ್ತಂಗಡಿ: ಅನೈತಿಕ ಪೊಲೀಸ್ ಗಿರಿ ಪ್ರಕರಣ - ಮೂವರು ಆರೋಪಿಗಳ ಬಂಧನ

 

error: Content is protected !!
Scroll to Top