(ನ್ಯೂಸ್ ಕಡಬ) newskadaba.com ಮೂಡಿಗೆರೆ, ಡಿ.14 ಬೃಹತ್ ಮರವೊಂದು ಉರುಳಿ ಬಿದ್ದ ಘಟನೆ ಮೂಡಿಗೆರೆ ತಾಲೂಕಿನ ಮರ್ಕಲ್ ಗ್ರಾಮದ ಅರೆಕೊಡಿಗೆ ಸುಕಲಮಕ್ಕಿ ಎಂಬಲ್ಲಿ ಸಂಭವಿಸಿದೆ. ನರೇಂದ್ರ ಗೌಡ ರವರ ಮನೆಗೆ ರಾತ್ರೋರಾತ್ರಿ 12.30 ರ ಸಮಯಕ್ಕೆ ಮರವೊಂದು ಉರುಳಿಬಿದ್ದ ಪರಿಣಾಮ ಮನೆ ಸಂಪುರ್ಣ ಹಾನಿಯಾಗಿದ್ದು, ಮನೆಯಲ್ಲಿದ್ದವರು ಅದೃಷ್ಟವಶಾತ್ ಸಾವಿನದವಡೆಯಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ನಿರಂತರವಾಗಿ ಸುರಿಯುತ್ತಿರುವ ಮಳೆಗೆ ರೈತರು ಕಂಗಾಲಾಗಿದ್ದಾರೆ. ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಗೆ ಮಲೆನಾಡಿನಾದ್ಯಂತ ಜನಜೀವನ ಅಸ್ತವ್ಯಸ್ತವಾಗಿದ್ದು, ಕಾಫಿ, ಭತ್ತ, ಹಾಗೂ ಮೊದಾಲಾದ ಬೆಳೆಗಳು ನೆಲಕೆಚ್ಚಿ ಹೋಗಿದೆ ಎಂದು ವರದಿ ತಿಳಿಸಿದೆ.