ಟ್ರಾಕ್ಟರ್ ಗೆ ಕಂಟೈನರ್ ಲಾರಿ ಡಿಕ್ಕಿ      ➤ ಅದೃಷ್ಟವಶಾತ್ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾದ ಚಾಲಕ

 (ನ್ಯೂಸ್ ಕಡಬ) newskadaba.com   ಉಪ್ಪಿನಂಗಡಿ, ಡಿ.14 ಓವರ್ಟೇಕ್ ಮಾಡುವ ಭರದಲ್ಲಿ ಕಂಟೈನರ್ ಲಾರಿಯೊಂದು ಟ್ರಾಕ್ಟರ್ ಗೆ ಡಿಕ್ಕಿ ಹೊಡೆದ ಘಟನೆ ಉಪ್ಪಿನಂಗಡಿ ಬಳಿ ಗಾಂಧಿಪಾರ್ಕ್ ಎಂಬಲ್ಲಿ ಸಂಭವಿಸಿದೆ. ಪರಿಣಾಮವಾಗಿ ಟ್ರಾಕ್ಟರ್ ಹಿಂಬದಿಯ ಟ್ರಾಲಿ ಮಗುಚಿ ಬಿದ್ದಿದ್ದು, ಅದೃಷ್ಟವಶಾತ್ ಚಾಲಕ ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾನೆ ಎನ್ನಲಾಗಿದೆ.

 

ನೆಲ್ಯಾಡಿ ಕಡೆಯಿಂದ ಬಿ,ಸಿ ರೋಡು ಕಡೆಗೆ ಬರುತ್ತಿದ್ದ ಕಂಟೈನರ್ ಲಾರಿಯು ಗಾಂಧಿಪಾರ್ಕ್ ಬಳಿ ಓವರ್ ಟೇಕ್ ಮಾಡಿದ್ದು, ಆಗ ಟ್ರಾಕ್ಟರ್ ಗೆ ಕಂಟೈನರ್ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.  ಅಪಘಾತದಿಂದ ಕೆಲ ಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು ಎನ್ನಲಾಗಿದೆ. ಈ ಕುರಿತು ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿ ತಿಳಿಸಿದೆ.

Also Read  ರಾಜ್ಯದ ಜನತೆಗೆ ಶಾಕ್ ನೀಡಿದ ಇಂಧನ ಇಲಾಖೆ ➤ಕರೆಂಟ್ ಬಿಲ್ ಕಟ್ಟದಿದ್ದರೆ ಕನೆಕ್ಷನ್ ಕಟ್.!

error: Content is protected !!
Scroll to Top