ಲಾಡ್ಜ್ ವೊಂದರಲ್ಲಿ  ವ್ಯಾಪಾರಿಯೊಬ್ಬರ ಮೃತದೇಹ ಪತ್ತೆ  

 (ನ್ಯೂಸ್ ಕಡಬ) newskadaba.com   ಮಂಗಳೂರು, ಡಿ.13  ಲಾಡ್ಜ್ ವೊಂದರಲ್ಲಿ ವ್ಯಾಪಾರಿಯೊಬ್ಬರ ಮೃತದೇಹ ಮಲಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಮಂಗಳೂರಿನಲ್ಲಿ ಸಂಭವಿಸಿದೆ.

ಮೃತರನ್ನು ಮೂಲತಃ ಕುಂಬಳೆ ನಿವಾಸಿ ಅಬ್ದುಲ್ ಕರೀಂ (55) ಎಂದು ಗುರುತಿಸಲಾಗಿದೆ. ನಗರದಲ್ಲಿ ವ್ಯಾಪಾರ ವಹಿವಾಟು ಹೊಂದಿದ್ದು, ನಿರಂತರ ಕರೆ ಮಾಡಿದರೂ ಸ್ವೀಕರಿಸಿಲ್ಲ ಎನ್ನಲಾಗಿದೆ.  ಸಂಶಯಗೊಂಡು ಲಾಡ್ಜ್ ಸಿಬ್ಬಂದಿ 11 ಗಂಟೆ ವೇಳೆ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ.

ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ, ತನಿಖೆ ಮುಂದುವರೆದಿದೆ ಎಂದು ಕಮಿಷನರ್ ಮಾಹಿತಿ ನೀಡಿದ್ದಾರೆಂದು ತಿಳಿದುಬಂದಿದೆ..

Also Read  ಕಡಬ: ಮದುವೆಯಾದ ಅಪ್ರಾಪ್ತ ಬಾಲಕಿ ಗರ್ಭವತಿ ➤ ಪತಿ ಹಾಗೂ ಇತರರ ವಿರುದ್ಧ ಕೇಸ್

 

error: Content is protected !!
Scroll to Top