ವಿದ್ಯಾರ್ಥಿ ಒಕ್ಕೂಟದಿಂದ ರಾಜ್ಯದಾದ್ಯಂತ ಡಿ.17 ರಂದು ಬಂದ್ ಗೆ ಕರೆ                                            

(ನ್ಯೂಸ್ ಕಡಬ) newskadaba.com ಕೊಪ್ಪಳ, ಡಿ. 13. ವಿಶ್ವವಿದ್ಯಾನಿಲಯ ಹಾಗೂ ಸಂಯೋಜಿತ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ಡಿ.17ರಂದು ರಾಜ್ಯಾದಾದ್ಯಂತ ಪದವಿ ಕಾಲೇಜುಗಳ ಬಂದ್ ಗೆ ಕರೆ ನೀಡಲಾಗಿದೆ ಎಂದು ಭಾರತಿಯ ರಾಷ್ಟ್ರೀಯ ಒಕ್ಕೂಟ ಜಿಲ್ಲಾ ಅಧ್ಯಕ್ಷ ಶಿವಕುಮಾರ್ ತೆಕ್ಕಲಕೋಟೆ ಹೇಳಿದ್ದಾರೆ.

ಅಲ್ಲದೇ ವಿಳಂಬವಾಗಿರುವ ಪರೀಕ್ಷಾ ಫಲಿತಾಂಶವನ್ನು ಕೂಡಲೇ ಪ್ರಕಟಿಸಬೇಕು ಮತ್ತು ಕೃಷ್ಣದೇವರಾಯ ವಿಶ್ವವಿದ್ಯಾನಿಲಯದ ಪರೀಕ್ಷೆ ನಡೆಸಿ 7 ತಿಂಗಳಾದರೂ ಫಲಿತಾಂಶ ಬಂದಿಲ್ಲ, ಸರಿಯಾಗಿ ಸ್ಕಾಲರ್ ಶಿಪ್ ನೀಡಬೇಕು, ಸಾರಿಗೆ ಸೌಲಭ್ಯ ಪರಿಹಾರ ನೀಡಬೇಕು, ಎಲ್ಲಾ ವರ್ಗಗಳ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಬೇಕು ಎಂದು ಒತ್ತಾಯಿಸಿ ಹೋರಾಟ ಮಾಡಲಾಗುವುದು ಎಂದು ಆಗ್ರಹಿಸಿದ್ದಾರೆ.

Also Read  ರೈತರಿಗೆ ಮತ್ತೊಂದು ಗುಡ್ ನ್ಯೂಸ್ ➤ ಜ. 31 ರಂದು 'ರೈತಶಕ್ತಿ' ಯೋಜನೆಗೆ ಸಿಎಂ ಚಾಲನೆ                             

.

 

error: Content is protected !!
Scroll to Top