(ನ್ಯೂಸ್ ಕಡಬ) newskadaba.com ಡಿ .13. ಮಾಂಡೌಸ್ ಚಂಡಮಾರುತದ ಪ್ರಭಾವದಿಂದ ಕರ್ನಾಟಕದ ಬೆಂಗಳೂರು , ದಕ್ಷಿಣ ಒಳನಾಡಿನ ಕೆಲವು ಭಾಗ ಹಾಗೂ ಕರಾವಳಿಯಲ್ಲಿ ಡಿ.16 ರವರೆಗೆ ಅಕಾಲಿಕ ಮಳೆಯಾಗುವ ಸಾಧ್ಯತೆಯಿದೆ ಎಂದು ಹಾವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇಂದು ಕೂಡ ರಾಜ್ಯಾದ್ಯಂತ ಗುಡುಗು ಸಹಿತ ಮಳೆ ಮುಂದುವರಿಯಲಿದೆ. ಚಾಮರಾಜನಗರ ,ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಹಳದಿ ಅಲರ್ಟ್ ಘೋಷಿಸಲಾಗಿದೆ. ಈ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇದೆ. ಹಾಗೇ ,ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕರ್ನಾಟಕ ಜಿಲ್ಲೆಗಳಾದ ಬಾಗಲಕೋಟೆ,ಬೆಳಗಾವಿ, ಬೀದರ್,ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಹಾವೇರಿ, ಗದಗ,ಮತ್ತು ಬಳ್ಳಾರಿಯಲ್ಲಿ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ. ನಿನ್ನೆ ಚಾಮರಾಜನಗರದಲ್ಲಿ 69ಮಿಲಿ ಮೀಟರ್, ಶಿವಮೊಗ್ಗದಲ್ಲಿ 57.5 ಮಿಲಿ ಮೀಟರ್, ಚಿಕ್ಕಮಗಳೂರಿನಲ್ಲಿ 53 ಮಿಲಿ ಮೀಟರ್, ತುಮಕೂರು-48.5 ಮಿಲಿ ಮೀಟರ್, ಮಂಡ್ಯ-46 ಮಿಲಿ ಮೀಟರ್,ಮೈಸೂರು-44.5 ಮಿಲಿ ಮೀಟರ್, ದಾವಣಗೆರೆ-42.5 ಮಿಲಿ ಮೀಟರ್, ಹಾಸನ-39 ಮಿಲಿ ಮೀಟರ್, ಕೋಲಾರ-33ಮಿಲಿ ಮೀಟರ್, ಬಳ್ಳಾರಿ-31 ಮಿಲಿ ಮೀಟರ್ ಹಾಗೂ ಬೆಂಗಳೂರು ನಗರದಲ್ಲಿ 31 ಮಿಲಿ ಮೀಟರ್ ಮಳೆಯಾಗಿದೆ.