20 ಟನ್ ಫಿಶ್ ಕಳವು ➤ಆರೋಪಿಯ ವಿರುದ್ದ ದೂರು ದಾಖಲು      

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 13. ಫಿಶ್ ಮಿಲ್ ನ ತಲಾ 50 ಕೆ.ಜಿ ತೂಕದ 400 ಚೀಲಗಳು ಕಳವಾದ ಘಟನೆ ಬೈಕಂಪಾಡಿಯ ಗೋದಾಮಿನಲ್ಲಿ ಸಂಭವಿಸಿದೆ.

ಗೋದಾಮಿನ ಮೇಲ್ವಿಚಾರಕ ಇರ್ಫಾನ್ ಈ ಫಿಶ್ ಮಿಲ್  ಚೀಲಗಳನ್ನು ಕದ್ದೊಯ್ದಿರುವುದಾಗಿ ಅದರ ವ್ಯವಸ್ಥಾಪಕ ಪಣಂಬೂರು ಪೊಲೀಸ್ ಠಾಣೆಗೆ ದೂರು ನಿಡಿದ್ದಾರೆ. ಉಳ್ಳಾಲದ ಕೋಟೆಪುರದ ಮಹಮ್ಮದ್ ಸಮೀರ್ ಎಂಬವರ ಮಾಲಕತ್ವದ “ಯುನೈಟೆಡ್ ಮೆರೈನ್ ಪ್ರಾಡಕ್ಟ್ಸ್” ಕಾರ್ಖಾನೆಯಲ್ಲಿ ಫಿಶ್ ಮಿಲ್ ಅನ್ನು ತಯಾರಿಸಿ 50 ಕೆ.ಜಿ. ತೂಕದ ಚೀಲಗಳಲ್ಲಿ ತುಂಬಿಸಿಡುತ್ತಿದ್ದು, ಗೋದಾಮಿಗೆ ಬಂದು ಪರಿಶೀಲಿಸಿದಾಗ ಶೇಖರಿಸಿಟ್ಟಿದ್ದ ಫಿಶ್ ಮಿಲ್ ನ ಚೀಲಗಳು ಕಾಣೆಯಾಗಿದ್ದವು. ಈ ಬಗ್ಗೆ ಇಸಾಕ್ ಎಂಬವರು ನೀಡಿದ ದೂರಿನಂತೆ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ರೇಣುಕಾಸ್ವಾಮಿ ಕೊಲೆ ಪ್ರಕರಣ-  ಇಂದು ದರ್ಶನ್‌ ನ್ಯಾಯಾಂಗ ಬಂಧನ ಅವಧಿ ಮುಕ್ತಾಯ   ಎಸಿಎಂಎಂ ಕೋರ್ಟ್‌ ಗೆ ಜಾಮೀನು ಕೋರಿ ಅರ್ಜಿ ಸಲ್ಲಿಸುವ ಸಾಧ್ಯತೆ

.

 

error: Content is protected !!
Scroll to Top