(ನ್ಯೂಸ್ ಕಡಬ) newskadaba.com ಬೆಳಗಾವಿ, ಡಿ. 13. ಚರ್ಮಗಂಟು ರೋಗ ವ್ಯಾಪಕವಾಗಿ ಹರಡುತ್ತಿದ್ದು, ನಾಲ್ಕು ತಿಂಗಳಲ್ಲಿ 4,665 ಜಾನುವಾರುಗಳು ಮೃತಪಟ್ಟಿವೆ ಎಂದು ವರದಿ ತಿಳಿಸಿದೆ.
ಈ ಸೋಂಕಿನಿಂದ ಮೃತಪಟ್ಟಿರುವ 1 ವರ್ಷದೊಳಗಿನ ಕರುವಿಗೆ ತಲಾ ರೂ.5 ಸಾವಿರ, ಆಕಳಿಗೆ ರೂ.20 ಸಾವಿರ ಮತ್ತು ಎತ್ತಿಗೆ ರೂ.30 ಸಾವಿರ ಪರಿಹಾರ ನಿಗದಿಪಡಿಸಲಾಗಿದೆ ಎನ್ನಲಾಗಿದೆ. ಚರ್ಮಗಂಟು ರೋಗ ಶಾಪವಾಗಿ ಪರಿಣಮಿಸಿದ್ದು, ಸುಮಾರು ರೂ.3 ಲಕ್ಷದವರೆಗೆ ಬೆಲೆಬಾಳುವ ಎತ್ತುಗಳು ಚರ್ಮಗಂಟು ರೋಗದಿಂದ ಮೃತಪಟ್ಟಿರುವುದು ರೈತರ ಆತಂಕಕ್ಕೆ ಕಾರಣವಾಗಿದ್ದು, ಜಾನುವಾರುಗಳಿಗೆ ಚಿಕಿತ್ಸೆ ಕೊಡಿಸಲು ಸಾಕಷ್ಟು ಹಣ ಖರ್ಚು ಮಾಡಿದ್ದಾರೆ. ಆದರೆ ಪರಿಹಾರ ವಿತರಣೆ ವಿಳಂಬವಾಗಿದ್ದರಿಂದ ರೈತರು ಸಮಸ್ಯೆ ಎದುರಿಸುವಂತಾಗಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಜಿಲ್ಲಾ ಘಟಕದ ಕಾರ್ಯಧ್ಯಕ್ಷ ರವಿ ಸಿದ್ದಮ್ಮ ರವರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.