(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 13. “ಅಮೃತ ಸಿರಿ” ಯೋಜನೆಯಡಿ ಕೊಯ್ಲದ ಜಾನುವಾರು ತಳಿ ಸಂವರ್ಧನಾ ಕೇಂದ್ರದಲ್ಲಿ ಲಭ್ಯವಿರುವ 75 ಹೆಣ್ಣು ಕರು ಹಾಗೂ ಗಡಸುಗಳನ್ನು ಅಂದಾಜು 375ರಿಂದ 625 ರೂ.ಗಳಿಗೆ ರೈತರಿಗೆ, ದೇವದಾಸಿಯರಿಗೆ, ವಿಧವೆಯರಿಗೆ, ವಾರ್ ವಿಡೋಸ್ ಹಾಗೂ ಶವಸಂಸ್ಕಾರ ಕಾರ್ಮಿಕರಿಗೆ ವಿತರಿಸಲಾಗುತ್ತದೆ.
ಇದಕ್ಕೆ ಸಂಬಂಧಿಸಿದ ತಾಲೂಕು ಪಶು ಆಸ್ಪತ್ರೆಯಿಂದ ನಿಗದಿತ ನಮೂನೆಯ ಅರ್ಜಿ ಪಡೆದು, ಅಗತ್ಯ ದಾಖಲಾತಿಗಳೊಂದಿಗೆ ಇದೇ ಡಿ.30ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಳಿಗಾಗಿ ತಾಲೂಕು ಮುಖ್ಯ ಪಶುವೈದ್ಯಾಧಿಕಾರಿ (ಆಡಳಿತ) ಬಂಟ್ವಾಳ ದೂ.ಸಂಖ್ಯೆ: 9481445365, ಬೆಳ್ತಂಗಡಿ ದೂ.ಸಂಖ್ಯೆ: 9448533922, ಮಂಗಳೂರು ದೂ.ಸಂಖ್ಯೆ:9243306956, ಮೂಡಬಿದ್ರೆ ದೂ.ಸಂಖ್ಯೆ: 7204271943, ಪುತ್ತೂರು ದೂ.ಸಂಖ್ಯೆ: 9448624950, ಕಡಬ ದೂ.ಸಂಖ್ಯೆ: 9483922594 ಹಾಗೂ ಸುಳ್ಯ ದೂ.ಸಂಖ್ಯೆ: 9844995078 ಅನ್ನು ಸಂಪರ್ಕಿಸುವಂತೆ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.